ಟರ್ಕಿ-ಸಿರಿಯಾದಲ್ಲಿ ಭೂಕಂಪ: 15 ಸಾವಿರ ದಾಟಿದ ಸಾವಿನ ಸಂಖ್ಯೆ

267

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಪ್ರಬಲ ಭೂಕಂಪನಕ್ಕೆ ಟರ್ಕಿ ಹಾಗೂ ಸಿರಿಯಾ ಅಕ್ಷರಶಃ ರುದ್ರಭೂಮಿಯಾಗಿ ಬದಲಾಗಿದೆ. ಭೂಕಂಪನದ ತೀವ್ರತೆಗೆ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಟರ್ಕಿಯಲ್ಲಿ 12,391 ಜನರು ಪ್ರಾಣ ಕಳೆದುಕೊಂಡರೆ, ಸಿರಿಯಾದಲ್ಲಿ 2,992 ಜನರು ಮೃತಪಟ್ಟಿದ್ದಾರೆ.

ರಕ್ಷಣಾ ಕಾರ್ಯ ಇಂದಿಗೂ ಮುಂದುವರೆದಿದೆ. ಇಲ್ಲಿಯ ಭೂಕಂಪನದ ಭಯಾನಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳು ಟರ್ಕಿ ಹಾಗೂ ಸಿರಿಯಾಗೆ ನೆರವಿನ ಹಸ್ತ ಚಾಚಿವೆ. ಟರ್ಕಿಯಲ್ಲಿ 8.5 ಕೋಟಿಯಷ್ಟು ಜನರಿದ್ದು, ಇದರಲ್ಲಿ 1.3 ಕೋಟಿಯಷ್ಟು ಜನರು ಭೂಕಂಪನದಿಂದ ನಿರಾಶ್ರಿತರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!