ಪೊಲೀಸ್ ಮನೆಯಲ್ಲೇ ಗಾಂಜಾ ಪತ್ತೆ

313

ಪ್ರಜಾಸ್ತ್ರ ಸುದ್ದಿ

ಧಾರವಾಡ: ರಾಜ್ಯದ ತುಂಬಾ ಇದೀಗ ಗಾಂಜಾ ಪತ್ತೆ ಪ್ರಕರಣಗಳು ಜೋರಾಗಿ ನಡೆಯುತ್ತಿವೆ. ಹೀಗಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಒಂದಲ್ಲ ಒಂದು ಪ್ರಕರಣಗಳು ಹೊರ ಬರುತ್ತಿವೆ. ಇದರ ನಡುವೆ ಪೊಲೀಸ್ ಕಾನ್ಸ್ ಟೇಬಲ್ ಮನೆಯಲ್ಲಿಯೇ ಗಾಂಜಾ ಪತ್ತೆಯಾಗಿದೆ. ನಗರದ ಮುರುಘಾಮಠದ ಹತ್ತಿರ ಇರುವ ಪೊಲೀಸ್ ಕಾನ್ಸ್ ಟೇಬಲ್ ಸಂಜು ಪಾಟೀಲ ಮನೆಯಲ್ಲಿ ಗಾಂಜಾ ಆಗಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ ಈತ, ಪದೆಪದೆ ದೀರ್ಘಾವಧಿ ರಜೆ ಪಡೆದುಕೊಳ್ತಿದ್ದ. ಹೀಗಾಗಿ ಪೊಲೀಸ್ ಇಲಾಖೆ ಆತನನ್ನ ವಜಾಗೊಳಿಸಿತ್ತು. ಮೂಲತಃ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕನದಾಳ ಗ್ರಾಮದ ಈತ, ಧಾರವಾಡದಲ್ಲಿ ವಾಸವಾಗಿದ್ದ. ಈತನ ಮನೆಯಲ್ಲಿ ಗಾಂಜಾ ಇರುವು ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಲಾಗಿದೆ. ಧಾರವಾಡ ಉಪನಗರ ಠಾಣೆ ಪೊಲೀಸರು 283 ಗ್ರಾಂ ಗಾಂಜಾ ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಇದಕ್ಕಿಂತ ಬೆಚ್ಚಿಬೀಳಿಸುವ ಘಟನೆ ಅಂದ್ರೆ, ಚಿತ್ರದುರ್ಗದಲ್ಲಿ ಬರೋಬ್ಬರಿ 4 ಕೋಟಿ ಮೌಲ್ಯದ ಗಾಂಜಾ ಬೆಳೆದಿದ್ದ ಆರೋಪಿಯನ್ನ ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!