ಗಾಂಜಾ ಸಾಗಿಸುತ್ತಿದ್ದವನ ಬಂಧನ

519

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಬೈಕ್‌ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಯುವಕನನ್ನು ಬಂಧಿಸಲಾಗಿದೆ. ಜಿಲ್ಲೆಯ ಕೊಲ್ಹಾರ ಪಟ್ಟಣದ ಗಾನದೇವಿ ಸರ್ಕಲ್ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂದಿಸಲಾಗಿದೆ.

ಬದಾಮಿ ಮೂಲದ ಮೈಬೂಬ ದಾವಲಮಲೀಕ್ ದನ್ನೂರ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 400 ಗ್ರಾಂ ಒಣ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಅಲ್ಲದೇ, ಮಾದಕ ವಸ್ತು ಸಾಗಾಟ ಕಾಯ್ದೆ 20B ಹಾಗೂ 8C ಅಡಿಯಲ್ಲಿ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!