ಮುಖ್ಯಮಂತ್ರಿ ಬದಲಿಸಲು ಆರ್ ಎಸ್ಎಸ್ ಬಯಸಿದೆ

253

ಪ್ರಜಾಸ್ತ್ರ ಸುದ್ದಿ

ಮಸ್ಕಿ: ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಉಪ ಚುನಾವಣೆಯ ಪ್ರಚಾರದಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪರನ್ನ ಬದಲಾಯಿಸಲು ಆರ್ ಎಸ್ಎಸ್ ಬಯಸಿದೆ ಎಂದಿದ್ದಾರೆ. ಹೀಗಾಗಿ ಯತ್ನಾಳ ಹಾಗೂ ಈಶ್ವರಪ್ಪ ಯಡಿಯೂರಪ್ಪ ವಿರುದ್ಧ ಮಾತ್ನಾಡ್ತಿದ್ದಾರೆ ಅಂತಾ ಹೇಳಿದರು.

ಸಮಸ್ಯೆಗಳನ್ನ ನಿಭಾಯಿಸಲು ಸರ್ಕಾರಕ್ಕೆ ಶಕ್ತಿ ಇಲ್ಲ. ಕಳೆದ ನಾಲ್ಕು ತಿಂಗಳಿಂದ ಯತ್ನಾಳ, ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪಗಳನ್ನ ಮಾಡ್ತಿದ್ರೂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಇನ್ನು ಈಶ್ವರಪ್ಪ ರಾಜ್ಯಪಾಲರಿಗೆ ಬರೆದ ಪತ್ರದ ವಿಚಾರ ಗಂಭೀರವಾದದ್ದು. ಇದನ್ನ ನೋಡಿದ್ರೆ ಮಂತ್ರಿಮಂಡಲದಲ್ಲಿ ಎಲ್ಲವೂ ಸರಿಯಿಲ್ಲ ಎಂದರು.

ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಯಾಕೆ ಸೇರಿದರು ಅನ್ನೋ ಶಾಸಕ ರೇಣುಕಾಚಾರ್ಯ ಮಾತಿಗೆ ಉತ್ತರಿಸಿದ ಅವರು, ನಾನು ಜೆಡಿಎಸ್ ತೊರೆದಿಲ್ಲ. ಡಿಸಿಎಂ ಸ್ಥಾನದಿಂದ ದೇವೇಗೌಡರು ಕಿತ್ತಾಕಿದರು. ಹೀಗಾಗಿ ಅಹಿಂದ ಕಟ್ಟಿದೆ. ಕಾಂಗ್ರೆಸ್ ನವರು ಕರೆದಿದ್ದಕ್ಕೆ ಸೋನಿಯಾ ಗಾಂಧಿ ಸುಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಅಂತಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!