14 ವರ್ಷದ ಬಳಿಕ ಬೆಂಕಿಕಡ್ಡಿ ಬೆಲೆ ಏರಿಕೆ

258

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಇನ್ನು ಆಗುತ್ತಲೇ ಇದೆ. ಇದರಿಂದಾಗಿ ಜನರ ಪಾಡು ಹೇಳತೀರದು. ಬೆಲೆ ಏರಿಕೆ ಸಾಲಿಗೆ ಇದೀಗ ಬೆಂಕಿಪೊಟ್ಟಣ ಸೇರಿಕೊಂಡಿದೆ. 14 ವರ್ಷಗಳ ಬಳಿಕ ಬೆಂಕಿಪೊಟ್ಟಣ ಬೆಲೆ ಏರಿಕೆ ಕಾಣುತ್ತಿದೆ.

ಈ ಮೊದಲು 50 ಪೈಸೆಯಿದ್ದ ಬೆಂಕಿಪೊಟ್ಟಣ 2007ರಲ್ಲಿ 1 ರೂಪಾಯಿ ಆಯ್ತು. ಈಗ 2 ರೂಪಾಯಿಗೆ ಏರಿಕೆಯಾಗುತ್ತಿದೆ. ಡಿಸೆಂಬರ್ 1ರಿಂದ 2 ರೂಪಾಯಿ ಆಗಲಿದೆ ಎಂದು, 5 ಪ್ರಮುಖ ಬೆಂಕಿಪೊಟ್ಟಣ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ತಮಿಳುನಾಡಿನ ಶಿವಕಾಶಿಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!