ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಗಣಿ ಸಚಿವ ಮುರುಗೇಶ ನಿರಾಣಿ ಬಳಿ 500 ಸೆಕ್ಸ್ ಸಿಡಿಗಳಿವೆ ಎಂದು ಉದ್ಯಮಿ ಅಲಂ ಪಾಷಾ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತ್ನಾಡಿದ ಅವರು, ಮುರುಗೇಶ ನಿರಾಣಿ ಒಬ್ಬ ಸಿಡಿ ಬಾಬಾ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಸಚಿವ ಮುರುಗೇಶ ನಿರಾಣಿ ಬಳಿ ರಾಜಕಾರಣಿಗಳ, ಮುಖಂಡರ ಸೆಕ್ಸ್ ಸಿಡಿಗಳಿವೆ. ಅವುಗಳನ್ನ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡ್ತಿದ್ದಾರೆ ಎಂದು ಉದ್ಯಮಿ ಅಲಂ ಪಾಷಾ ಆರೋಪ ಮಾಡಿದ್ದಾರೆ.