ವಾಸಿಂಗ್ಟನ್: ಭಾರತೀಯ ಮೂಲದ ಮಾಡೆಲ್ ಶ್ರೀಶೈನಿಗೆ ಆಸ್ಪತ್ರೆಯಲ್ಲಿ ಕಿರೀಟವನ್ನ ಮುಡಿಸಲಾಗಿದೆ. ಮಿಸ್ ವರ್ಲ್ಡ್ ಅಮೆರಿಕ 2019 ಫಿನಾಲೆಯಲ್ಲಿ ಕುಸಿದು ಬಿದ್ದ ಶ್ರೀಶೈನಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅವಳಿದ್ದಲ್ಲಿಯೇ ಬಂದು ಕಿರೀಟ ಮುಡಿಗೇರಿಸಲಾಗಿದೆ.
ಗೌನ್ ರೌಂಡ್ ನಲ್ಲಿ ಭಾಗವಹಿಸುವ ಮೊದ್ಲು ಶ್ರೀಶೈನಿ ಕುಸಿದು ಬಿದ್ದು ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದಳು. ನೋವಿನ ನಡುವೆ ಐದು ಪ್ರಶಸ್ತಿಗಳು ಶ್ರೀಶೈನಿ ಹುಡುಕಿಕೊಂಡು ಬಂದಿವೆ. ಟಾಪ್ ಇನ್ ಫ್ಲೂಯೆನ್ಸರ್ ಅವಾರ್ಡ್, ಫಸ್ಟ್ ರನ್ನರ್ ಅಪ್ ಟ್ಯಾಲೆಂಟ್, ಫಸ್ಟ್ ರನ್ನರ್ ಅಪ್ ಟಾಪ್ ಮಾಡೆಲ್, ಬ್ಯೂಟ್ ವಿತ್ ಎ ಪರ್ಸನ್ ಅವಾರ್ಡ್ ಸೇರಿದಂತೆ ಎಂಟರ್ ಪ್ರೆನ್ಶೂರ್ ಚಾಲೆಂಜ್ ಅವಾರ್ಡ್ ನೀಡಿ ಗೌರವಿಸಲಾಗಿದೆ.