ಸಿಂದಗಿಯ ಮತಗಟ್ಟೆಗಳ ಸೌಲಭ್ಯ ಪರಿಶೀಲಿಸಿದ ಡಿಸಿ

177

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಸಿಂದಗಿ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತಗಟ್ಟೆಗಳ ಮೂಲಭೂತ ಸೌಲಭ್ಯಗಳ ಕುರಿತು ಜಿಲ್ಲಾಧಿಕಾರಿ ವಿಜಯಮಹಾಂತೇಶ್ ದಾನಮ್ಮನವರ್ ಪರಿಶೀಲನೆ ನಡೆಸಿದರು.

ಮೋರಟಗಿ ಗ್ರಾಮದ ಮತಗಟ್ಟೆ ಸಂಖ್ಯೆಗಳಾದ 112 ರಿಂದ 117, ಗಬಸಾವಳಗಿ ಗ್ರಾಮದ 119 ರಿಂದ 122, ಯಗರಲ್ ಕೆ.ಡಿ ಗ್ರಾಮದ 189, ಯರಗಲ್ ಬಿ.ಕೆ ಗ್ರಾಮದ 186ರಿಂದ 191, ಚಿಕ್ಕಸಿಂದಗಿ ಗ್ರಾಮದ 208ರಿಂದ 210 ಹಾಗೂ ಕನ್ನೊಳ್ಳಿ ಗ್ರಾಮದ 215ರಿಂದ 218ರ ಮತಗಟ್ಟೆಗಳ ಮೂಲಭೂತ ಸೌಲಭ್ಯ ಪರಿಶೀಲನೆ ನಡೆಸಿ ಏನೆಲ್ಲ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೆ ವೇಳೆ ಯರಗಲ್ ಬಿ.ಕೆ ಗ್ರಾಮದ 7ನೇ ತರಗತಿ ವಿದ್ಯಾರ್ಥಿ ತೋಪಿಕ್ ಇಮಾಮಸಾಬ ಅಗಸಿ ಅಂದತ್ವದ ಪ್ರಥಮ ಚಿಕತ್ಸೆಗಾಗಿ ಡಿ.ಎಚ್.ಓ ಅವರ ಜೊತೆ ಫೋನ್ ಮೂಲಕ ಮಾತನಾಡಿ ಚಿಕಿತ್ಸೆ ನೀಡಲು ತಿಳಿಸಿದರು. ಚಿಕ್ಕಸಿಂದಗಿ ಗ್ರಾಮದ 3 ನೇ ತರಗತಿ ವಿದ್ಯಾರ್ಥಿನಿ ಸುಗಲಾ ದೇವಿಂದ್ರಯ್ಯ ಹಿರೇಮಠ ವಿಕಲಚೇತನರಿದ್ದು ಎರಡು ದಿನದಲ್ಲಿ ವ್ಹೀಲ್ ಚೇರ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಈ ವೇಳೆ ಸಿಂದಗಿ ತಹಶೀಲ್ದಾರ್ ನಿಂಬಣ್ಣ ಬಿರಾದಾರ, ಗ್ರೇಡ್-2 ತಹಶೀಲ್ದಾರ್ ಪ್ರಕಾಶ ಸಿಂದಗಿ, ಆಲಮೇಲ ಆರ್ ಐ ಅತ್ತಾರ, ಕಂದಾಯ ನಿರೀಕ್ಷಕ ಮಕಾಂದರ ಸೇರಿದಂತೆ ಸಿಂದಗಿ ಹಾಗೂ ಆಲಮೇಲ ಭಾಗದ ವಿವಿಧ ಅಧಿಕಾರಿಗಳಿದ್ದರು.




Leave a Reply

Your email address will not be published. Required fields are marked *

error: Content is protected !!