ಸಿಎಸ್ ಸಿ ಆಗಿ ಜ.ನರವಣೆ ಅಧಿಕಾರ ಸ್ವೀಕಾರ

410

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಭಾರತೀಯ ಸೇನಾ ಪಡೆಯ ಮೂರು ವಿಭಾಗದ ಮುಖ್ಯಸ್ಥರ ಹುದ್ದೆಯಾದ ಚೀಫ್ ಆಫ್ ಸ್ಟಾಫ್ ಕಮಿಟಿ ಅಧ್ಯಕ್ಷರಾಗಿ ಜನರಲ್ ಎಂ.ಎಂ ನರವಣೆ ಇಂದು ಅಧಿಕಾರ ಸ್ವೀಕಾರ ಮಾಡಿದರು. ಡಿಸೆಂಬರ್ 8ರಂದು ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ ಹೊಂದಿದರಿಂದಾಗಿ ನರವಣೆಯವರನ್ನು ಇದೀಗ ನೇಮಕ ಮಾಡಲಾಗಿದೆ.

ಸಿಡಿಎಸ್ ಪೋಸ್ಟ್ ಸೃಷ್ಟಿಸುವುದಕ್ಕೂ ಮೊದಲು ಸಿಎಸ್ ಸಿ ಇತ್ತು. ರಾವತ್ ಸಿಡಿಎಸ್ ಆದ್ಮೇಲೆ ಸಿಎಸ್ ಸಿಗೆ ಮನೋಜ್ ನರವಣೆ ಅವರನ್ನು ನೇಮಕ ಮಾಡಲಾಗಿತ್ತು. 2019ರಲ್ಲಿ ಸಿಡಿಎಸ್ ಆದ್ಮೇಲೆ ಈ ಸ್ಥಾನ ತೆರವು ಮಾಡಲಾಗಿತ್ತು. ಸೇನೆ, ವಾಯು, ನೌಕಪಡೆಯ ಮುಖ್ಯಸ್ಥರ ಪೈಕಿ ಅತ್ಯಂತ ಹಿರಿಯರು ಚೀಫ್ ಸ್ಟಾಫ್ ಕಮಿಟಿ ಅಧ್ಯಕ್ಷರಾಗುತ್ತಿದ್ದರು.

ಈಗ ಜನರಲ್ ಬಿಪಿನ್ ರಾವತ್ ನಿಧನದ ಬಳಿಕ ಮರಳಿ ಚೀಫ್ ಸ್ಟಾಫ್ ಕಮಿಟಿ ಅಧ್ಯಕ್ಷರನ್ನಾಗಿ ನರವಣೆಯವರನ್ನು ನೇಮಕ ಮಾಡಲಾಗಿದೆ. ಸಿಡಿಎಸ್ ಆಗಿ ನರವಣೆ ನೇಮಕವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!