ಗುಡ್ಡ ಕುಸಿದು ಮಕ್ಕಳಿಬ್ಬರ ಸಾವು: ಪರಿಹಾರ ವಿತರಣೆ

334

ಪ್ರಜಾಸ್ತ್ರ ಸುದ್ದಿ

ಮಂಗಳೂರು: ಜಿಲ್ಲೆಯ ಗುರುಪುರ ಬಂಗ್ಲೆಗುಡ್ಡೆಯಲ್ಲಿ ಭಾನುವಾರ ಗುಡ್ಡ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ್ರು. ಈ ಸಂಬಂಧ ಮೃತ ಮಕ್ಕಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ನೀಡಲಾಯ್ತು.

ಮುಜರಾಯಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ ಅವರ ನೇತೃತ್ವದಲ್ಲಿ ಪರಿಹಾರದ ಚೆಕ್ ವಿತರಿಸಲಾಯ್ತು. ಈ ವೇಳೆ ಜಿಲ್ಲಾಧಿಕಾರಿ ಸಿಂಧೂ ರೂಪೇಶ ಇದ್ದರು.

ಭಾನುವಾರ ಬಂಗ್ಲೆಗುಡ್ಡೆಯ ಬಳಿ ಗುಡ್ಡ ಕುಸಿದು ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಈ ವೇಳೆ 10 ವರ್ಷದ ಸಹಾಲ ಹಾಗೂ 16 ವರ್ಷದ ಸಫ್ವಾನ ಅನ್ನೋ ಇಬ್ಬರು ಮಕ್ಕಳು ಸಾವನ್ನಪ್ಪಿದ್ರು. ಎನ್ ಡಿಆರ್ ಎಫ್ ಪಡೆ 5 ಗಂಟೆಗಳ ಕಾರ್ಯಾಚರಣೆ ಬಳಿಕ ಮೃತದೇಹವನ್ನ ಹೊರ ತೆಗೆದಿದ್ರು.




Leave a Reply

Your email address will not be published. Required fields are marked *

error: Content is protected !!