ಮಹಿಳಾ ವಿವಿ ಸೋಂಕಿತನಿಂದ 7 ಜನಕ್ಕೆ ಕೋವಿಡ್ 19

362

ಪ್ರಜಾಸ್ತ್ರ ಸುದ್ದಿ

ವಿಜಯಪುರ: ನಗರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸಿಬ್ಬಂದಿಯೊಬ್ಬರು ಕೋವಿಡ್ 19 ಸೋಂಕಿನಿಂದ ಇತ್ತೀಚೆಗೆ ಮೃತಪಟ್ಟಿದ್ದಾರೆ. ಇದೀಗ ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಲ್ಲಿ 7 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 52 ವರ್ಷದ ಅಟೆಂಡರ್ ರೋಗಿ ಸಂಖ್ಯೆ 14,497 ಇವರ ಪ್ರಾಥಮಿಕ ಸಂಪರ್ಕದಿಂದ, 7 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಇವರಿಗೆ ಸೂಕ್ತ ನಿಗಾ ಹಾಗೂ ಚಿಕಿತ್ಸೆ ನೀಡಲಾಗ್ತಿದೆ. ಇದ್ರಿಂದಾಗಿ ರಾಜ್ಯದ ಮೊದಲ ಮಹಿಳಾ ವಿವಿಗೆ ಕರೋನಾ ಶಾಕ್ ನೀಡಿದೆ.

ನಿಧನ ಹೊಂದಿದ್ಮೇಲೆ 12 ಜನರನ್ನ ಹೋಂ ಕ್ವಾರಂಟೈನ್ ಮಾಡಲಾಗಿತ್ತು. 200 ಜನರಲ್ಲಿ ಆತಂಕ ಮೂಡಿತ್ತು. ಅದು ಈಗ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.




Leave a Reply

Your email address will not be published. Required fields are marked *

error: Content is protected !!