ಮೋದಿ ನಾಯಕತ್ವಕ್ಕೆ 6 ವಸಂತ ಮತ್ತು 5 ಲಕ್ಷ ಕೋಟಿ ಡಾಲರ್ ಸವಾಲು

332

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರದಲ್ಲಿ ಪ್ರಧಾನಿ ಮೋದಿ ನಾಯಕತ್ವದಲ್ಲಿ ಎನ್ ಡಿಎ ಸರ್ಕಾರ 2.0 ಆಡಳಿತಕ್ಕೆ ಬಂದು ಒಂದು ವರ್ಷ ಕಂಪ್ಲೀಟ್ ಮಾಡಿದೆ. 2ನೇ ಅವಧಿಗೆ ಬಿಜೆಪಿ ಕೇಂದ್ರದ ಚುಕ್ಕಾಣಿ ಹಿಡಿದಿರುವುದ್ರಿಂದ 6 ವಸಂತಗಳನ್ನ ಪೂರೈಸಿದೆ. ಆದ್ರೆ, ಇದನ್ನ ಆಚರಣೆ ಮಾಡುವ ಸ್ಥಿತಿಯಲ್ಲಿ ಇಲ್ಲ.

ಯೆಸ್, ಕರೋನಾ ಮಹಾಮಾರಿ, ಮಿಡತೆ ಹಾವಳಿ, ಅಂಫನ್ ಚಂಡಮಾರುತ, ಪ್ರವಾಹದಂತ ಪ್ರಕೃತಿ ವಿಕೋಪ ಘಟನೆಗಳ ನಡುವೆ ಸಿಲುಕಿರುವ ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರ ನಿಂತುಕೊಂಡು ಕೆಲಸ ಮಾಡುವ ಸಮಯವಿದು. ಅದನ್ನ ಎಷ್ಟರ ಮಟ್ಟಿಗೆ ಮೋದಿ ಸರ್ಕಾರ ಮಾಡ್ತಿದೆ ಅನ್ನೋದು ಜನರಿಗೆ ಗೊತ್ತಿದೆ. ಆದ್ರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ವರ್ಷಾಚರಣೆಯನ್ನ ಸಂಭ್ರಮಿಸುವ ಸಮಯವಾಗಿಲ್ಲ.

ಮೋದಿ ನಾಯಕತ್ವದ ಮುಂದೆ ಸಾಕಷ್ಟು ಸವಾಲುಗಳಿವೆ. ಅದರಲ್ಲಿ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆ ಬಹುದೊಡ್ಡ ಸವಾಲು. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ಹಾಗೂ ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಭಾರತದಲ್ಲಿ ಈಗ ಆರ್ಥಿಕತೆ ಕುಸಿದಿದೆ. ಇದನ್ನ ಮೇಲಕ್ಕೆ ಎತ್ತುವುದೆ ಕಷ್ಟವಿದೆ. ಹೀಗಿರುವಾಗ 2024ಕ್ಕೆ 2ನೇ ಅವಧಿ ಮುಗಿಯುತ್ತೆ ಅಷ್ಟರಲ್ಲಿ ಈ ಗುರಿ ಸಾಧಿಸಬೇಕಿದೆ. ಹೀಗಾಗಿ ವರ್ಷಾಚರಣೆಯನ್ನ ಆನ್ ಲೈನ್ ಮೂಲಕವೇ ನಡೆಸಲು ಮುಂದಾಗಿದೆ.


TAG


Leave a Reply

Your email address will not be published. Required fields are marked *

error: Content is protected !!