ಗಣಿಹಾರ ಕರೋನಾ ಪ್ರಕರಣ: ಸೋಂಕಿತನ ಸಂಪರ್ಕಕ್ಕೆ ಬಂದವರೆಷ್ಟು ಗೊತ್ತಾ?

1050

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಗಣಿಹಾರ ಗ್ರಾಮದಲ್ಲಿಂದು ಕರೋನಾ ಸೋಂಕು ದೃಢಪಟ್ಟಿದೆ. 32 ವರ್ಷದ ವ್ಯಕ್ತಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ಮೆಕ್ಯಾನಿಕ್ ಕೆಲಸ ಮಾಡ್ತಿದ್ದ ವ್ಯಕ್ತಿ, ಕುಟುಂಬಸ್ಥರೊಂದಿಗೆ ಮೇ 15ರಂದು ಗ್ರಾಮಕ್ಕೆ ಬಂದು ಸಂಸ್ಥಾ ಕ್ವಾರಂಟೈನ್ ಆಗಿದ್ದ.

ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿದ್ದ ವ್ಯಕ್ತಿಯ ಗಂಟಲು ದ್ರವವನ್ನ ಮೇ 24ರಂದು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದು ಮೇ 29ರಂದು ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಆತನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪಕ್ಕೆ ಬಂದವರ ಲಿಸ್ಟ್ ಇಲ್ಲಿದೆ.

ಸೋಂಕಿತನ ಹೆಂಡ್ತಿ, ಮಕ್ಕಳು ಸಂಬಂಧಿಕರು ಸೇರಿದಂತೆ ಒಟ್ಟು 11 ಜನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ. ಇನ್ನು ದ್ವಿತೀಯ ಸಂಪರ್ಕಕ್ಕೆ 17 ಜನರು ಬಂದಿದ್ದಾರೆ. ಇವರು ಸೋಂಕಿತನ ಮನೆಯ ನೆರೆಹೊರೆಯವರಾಗಿದ್ದಾರೆ. ಇವರೆಲ್ಲರನ್ನ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಮನೆ ಬಿಟ್ಟು ಎಲ್ಲಿಯೂ ಹೋಗದಂತೆ ಅವರಿಗೆ ಸೂಚನೆ ನೀಡಲಾಗಿದೆ.

ಜಿಲ್ಲೆಯಲ್ಲಿ ಇಷ್ಟು ದಿನ ನಗರಕ್ಕೆ ಸೀಮಿತವಾಗಿದ್ದ ಸೋಂಕು, ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆಯಿಂದಾಗಿ ಪಟ್ಟಣ, ಗ್ರಾಮಕ್ಕೆ ವ್ಯಾಪಿಸಿಕೊಳ್ತಿದೆ. ಹೀಗಾಗಿ ಜನರು ಈ ಬಗ್ಗೆ ನಿರ್ಲಕ್ಷ್ಯ ವಹಿಸದೆ ಎಚ್ಚರಿಕೆ ವಹಿಸಬೇಕಿದೆ. ಹೊರ ರಾಜ್ಯದಿಂದ ಯಾರೆ ಬಂದರೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಸಂಬಂಧಪಟ್ಟವರಿಗೆ ಮಾಹಿತಿ ನೀಡುವ ಮೂಲಕ, ಇತರರಿಗೆ ತೊಂದರೆಯಾಗುವುದನ್ನ ತಪ್ಪಿಸುವ ಕೆಲಸ ಮಾಡಬೇಕಿದೆ.




Leave a Reply

Your email address will not be published. Required fields are marked *

error: Content is protected !!