ಇಂಡಿಯಾ ಬದಲು ಭಾರತ ಅಥವ ಹಿಂದೂಸ್ತಾನ್ ಹೆಸರಿಡಲು ಅರ್ಜಿ

316

ನವದೆಹಲಿ: ಭಾರತವನ್ನ ಸಹಜವಾಗಿಯೇ ಪ್ರತಿಯೊಬ್ಬರು ಇಂಡಿಯಾ ಎಂದು ಕರೆಯುತ್ತಾರೆ. ಭಾರತ ಅಥವ ಹಿಂದೂಸ್ತಾನ್ ಅನ್ನೋದು ಕಡಿಮೆ. ಹೀಗಾಗಿ ಬ್ರಿಟಿಷರು ಬಿಟ್ಟು ಹೋದ ಇಂಡಿಯಾ ಅನ್ನೋ ಪದದ ಬದಲು ಭಾರತ ಅಥವ ಹಿಂದೂಸ್ತಾನ್ ಎಂದು ಹೆಸರಿಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.

ದೆಹಲಿ ಮೂಲದ ವ್ಯಕ್ತಿಯೊಬ್ಬರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇಂಡಿಯಾ ಅನ್ನೋದು ವಸಹತುಶಾಹಿ ಗುರುತಾಗಿದೆ. ಇದರ ಬದಲಾಗಿ ಭಾರತ ಅಥವ ಹಿಂದೂಸ್ತಾನ್ ಎಂದಿಡಲು ಕೇಂದ್ರಕ್ಕೆ ಸೂಚಿಸಬೇಕೆಂದು ಕೋರಿದ್ದಾರೆ. ಇದು ಅಪೆಕ್ಸ್ ಕೋರ್ಟ್ ನಲ್ಲಿ ವಿಚಾರಣೆಗೆ ಬರಬೇಕಿತ್ತು. ಆದ್ರೆ, ಮುಖ್ಯನ್ಯಾಯಪೀಠಕ್ಕೆ ವರ್ಗಾವಣೆಯಾಗಿದೆ.

ಜೂನ್ 2ರಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಈ ಅರ್ಜಿಯ ವಿಚಾರಣೆಯನ್ನ ಕೈಗೆತ್ತಿಕೊಳ್ಳಲಿದೆ.

ಇನ್ನು ಇಂಗ್ಲಿಷನಲ್ಲಿ ಬರೆಯುವಾಗ ಇಂಡಿಯಾ ಎನ್ನುತ್ತೇವೆ. ಹಿಂದಿ ಭಾಷೆ ಇರುವ ರಾಜ್ಯಗಳು ಸೇರಿದಂತೆ ಬಹುತೇಕ ಕಡೆ ಹಿಂದೂಸ್ತಾನ್ ಅನ್ನೋದು, ಕರ್ನಾಟಕ ಸೇರಿ ಹಲವು ಕಡೆ ಭಾರತ ಎಂದು ಕರೆಯಲಾಗುತ್ತೆ. ಹೀಗಾಗಿ ಎಲ್ಲ ಭಾಷೆಯಲ್ಲಿ ಬರೆಯುವುದು, ಹೇಳುವುದು ಒಂದೇ ಇರ್ಲಿ ಅನ್ನೋ ವಾದ ಮೊದಲಿನಿಂದಲೂ ಕೇಳಿ ಬರ್ತಿದೆ.




Leave a Reply

Your email address will not be published. Required fields are marked *

error: Content is protected !!