ಛತ್ತೀಸಗಡದ ಪ್ರಥಮ ಸಿಎಂ ನಿಧನ

332

ನವದೆಹಲಿ: ಛತ್ತೀಸಗಡದ ಪ್ರಥಮ ಮುಖ್ಯಮಂತ್ರಿ ಅಜಿತ ಜೋಗಿ ನಿಧನರಾಗಿದ್ದಾರೆ. ಎರಡು ಬಾರಿ ಹಾರ್ಟ್ ಅಟ್ಯಾಕ್ ಗೆ ಒಳಗಾಗಿದ್ದ ಜೋಗಿ, ಕಳೆದ 22 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

ಕಳೆದ 2 ಗಂಟೆಯಿಂದ ನಾವು ಅವರ ಹೃದಯ ಕ್ರಿಯೆಯನ್ನ ಸರಿ ಮಾಡಲು ನೋಡಿದ್ವಿ. ಆದ್ರೆ, ಸಾಧ್ಯವಾಗ್ಲಿಲ್ಲವೆಂದು ರಾಯ್ಪುರದ ಶ್ರೀನಾರಾಯಣ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಈ ಬಗ್ಗ ಮಗ ಅಮಿತ ಜೋಗಿ ಟ್ವೀಟ್ ಮೂಲಕ ಸಾವಿನ ಸುದ್ದಿಯನ್ನ ಖಚಿತಪಡಿಸಿದ್ದಾರೆ.

ಛತ್ತೀಸಗಡ ಪ್ರತ್ಯೇಕವಾದ್ಮೇಲೆ 2000ದಿಂದ 2003ರ ವರೆಗೂ ಕಾಂಗ್ರೆಸ್ ನೇತೃತ್ವದಲ್ಲಿ ಸಿಎಂ ಆಗಿದ್ರು. ಮುಂಎ 2016ರಲ್ಲಿ ಕಾಂಗ್ರೆಸ್ ತೊರೆದು ಜನತಾ ಕಾಂಗ್ರೆಸ್ ಛತ್ತೀಸಗಡ(ಜೆ) ಅನ್ನೋ ಪಾರ್ಟಿ ಸ್ಥಾಪಿಸಿದ್ರು. ಜೋಗಿ ಪತ್ನಿ ರೇಣು ಜೋಗಿ ಶಾಸಕಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!