ಸಿಂದಗಿ ತಾಲೂಕಿನಲ್ಲಿ ಮತ್ತೊಂದು ಕರೋನಾ ಸೋಂಕು ಪತ್ತೆ

1167

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಲ್ಲಿ ಮತ್ತೊಂದು ಕರೋನಾ ಸೋಂಕು ದೃಢಪಟ್ಟಿದೆ. ತಾಲೂಕಿನ ಗಣಿಹಾರ ಗ್ರಾಮಕ್ಕೆ ಕರೋನಾ ಒಕ್ಕರಿಸಿದೆ. ಈ ಮೂಲಕ ತಾಲೂಕಿನಲ್ಲಿ 2ನೇ ಸೋಂಕು ದಾಖಲಾಗಿದೆ.

ಸೋಲಾಪುರದಿಂದ ಬಂದಿದ್ದ ವ್ಯಕ್ತಿಯನ್ನ ಗ್ರಾಮದಲ್ಲಿ ಸಂಸ್ಥಾ ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ ಅವಧಿ ಮುಗಿದ್ಮೇಲೆ ಆತನನ್ನ ಬಿಡುಗಡೆ ಮಾಡಲಾಗಿತ್ತು. ಅಲ್ದೇ, ಆತನ ಗಂಟಲು ದ್ರವ ಪರೀಕ್ಷೆ ಕಳುಹಿಸಲಾಗಿತ್ತು. ಅದು ಇದೀಗ ಬಂದಿದ್ದು ಆತನಿಗೆ ಸೋಂಕು ದೃಢಪಟ್ಟಿದೆ.

ಸೋಂಕು ದೃಢಪಟ್ಟ ವ್ಯಕ್ತಿಯನ್ನ ವಿಜಯಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಮೊದಲ ಕೇಸ್ ಪಟ್ಟಣದಲ್ಲಿ ದಾಖಲಾಗಿತ್ತು. ಇದೀಗ ಗ್ರಾಮಕ್ಕೆ ಕಾಲಿಟ್ಟಿದೆ. ಈ ಮೂಲಕ ತಾಲೂಕಿನಲ್ಲಿ ಇದೂ 2ನೇ ಪ್ರಕರಣವಾಗಿದೆ.




Leave a Reply

Your email address will not be published. Required fields are marked *

error: Content is protected !!