ಛತ್ತೀಸಗಡ ಸಿಎಂಗೆ ‘ವಿಶ್ವಾಸ’ಮತದ ಗೆಲುವು

218

ಪ್ರಜಾಸ್ತ್ರ ಸುದ್ದಿ

ರಾಯಪುರ: ಛತ್ತೀಸಗಡ ಸಿಎಂ ಭೂಪೇಶ್ ಬಘೇಲ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು. ಇದರಲ್ಲಿ ಸಿಎಂ ಭೂಪೇಶ್ ಗೆಲುವು ಸಾಧಿಸುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಅಧಿವೇಶನದ ಕೊನೆಯ ದಿನ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು. ಸುದೀರ್ಘ 13 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದು ಶುಕ್ರವಾರ ತಡರಾತ್ರಿ 1 ಗಂಟೆಗೆ ಧ್ವನಿ ಮತದ ಮೂಲಕ ಭೂಪೇಶ್ ಬಘೇಲ್ ಅವರು ಸರ್ಕಾರ ವಿಶ್ವಾಸಮತದಲ್ಲಿ ಗೆಲುವು ಸಾಧಿಸಿದೆ.

ಬಿಜೆಪಿ ಸಿಎಂ ವಿರುದ್ಧ ಹಲವು ಆರೋಪಗಳನ್ನು ಮಾಡಿತ್ತು. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿ, ಸರ್ಕಾರದ ವಿರುದ್ಧದ 109 ಚಾರ್ಜ್ ಶೀಟ್ ಪ್ರಸ್ತಾಪ ಮಾಡಿತ್ತು. ನಂತರ ಸಿಎಂ ಸರ್ಕಾರದ ಸಾಧನೆಗಳನ್ನು ಹೇಳುತ್ತಾ ಹೋದಂತೆ ವಿಪಕ್ಷ ಸದಸ್ಯರೆ ಸದನದಿಂದ ಹೊರ ನಡೆದರು. ಕೊನೆಗೆ ಸಿಎಂ ವಿಶ್ವಾಸಮತ ಪಡೆದು ಜಯ ಸಾಧಿಸಿದರು.

ಛತ್ತೀಸಗಡ ವಿಧಾನಸಭೆ 90 ಸದಸ್ಯರ ಬಲ ಹೊಂದಿದೆ. ಇದರಲ್ಲಿ 71 ಕಾಂಗ್ರೆಸ್, 13 ಬಿಜೆಪಿ ಸದಸ್ಯರನ್ನು ಹೊಂದಿದೆ. ಹೀಗಿರುವಾಗ ಅವಿಶ್ವಾಸ ಗೊತ್ತುವಳಿ ಮಂಡಿಸಿ ತೀವ್ರ ಮುಖಭಂಗ ಅನುಭವಿಸಿತು.




Leave a Reply

Your email address will not be published. Required fields are marked *

error: Content is protected !!