ಹರಿಯಾಣದ ನೀರು ಪಾಕ್ ಗೆ ಹರಿಯಲು ಬಿಡಲ್ಲ: ಪ್ರಧಾನಿ

360

ಚಕ್ರಿ ದಾದ್ರಿ: ಕಳೆದ 70 ವರ್ಷಗಳಿಂದ ಹರಿಯಾಣದ ನೀರು ಪಾಕಿಸ್ತಾನಕ್ಕೆ ಹರಿಯುತ್ತಿದೆ. ಇನ್ಮುಂದೆ ಪಾಕಿಸ್ತಾನಕ್ಕೆ ಆ ನೀರು ಹರಿಯಲು ಬಿಡುವುದಿಲ್ಲವೆಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಹರಿಯಾಣದ ಚಕ್ರಿ ದಾದ್ರಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತ್ನಾಡಿದ ಪಿಎಂ, ಕಳೆದ 70 ವರ್ಷಗಳಿಂದ ಹರಿಯಾಣದ ರೈತರ ನೀರು ಪಾಕಿಸ್ತಾನಕ್ಕೆ ಹರಿದಿದೆ. ಈ ನೀರನ್ನ ಇನ್ಮುಂದೆ ನಿಲ್ಲಿಸಿ, ನಿಮ್ಮ ಮನೆಗಳಿಗೆ ತಲುಪುವಂತೆ ಮಾಡುವುದಾಗಿ ಭರವಸೆ ನೀಡಿದ್ರು.

ಪಾಕ್ ಗೆ ಹರಿಯುವ ನೀರಿನ ಮೇಲೆ ಹರಿಯಾಣ ಹಾಗೂ ರಾಜಸ್ಥಾನಕ್ಕೆ ಹಕ್ಕಿದೆ. ಹಿಂದಿನ ಸರ್ಕಾರಗಳು ಅದನ್ನ ನಿಲ್ಲಿಸುವ ಕೆಲಸ ಮಾಡಿಲ್ಲ. ಆದ್ರೆ, ಮೋದಿ ನಿಮ್ಮ ಪರವಾಗಿ ಹೋರಾಟ ಮಾಡ್ತಾರೆ ಅಂತಾ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!