ಮೋದಿ ಉಪನಾಮ ಪ್ರಕರಣ: ಸುಪ್ರೀಂ ತಡೆಯಾಜ್ಞೆ

282

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಮೋದಿ ಉಪನಾಮ ಹೇಳಿಕೆ ಸಂಬಂಧ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ವಿರುದ್ಧ ಗುಜರಾತಿನಲ್ಲಿ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಗುಜರಾತ್ ಹೈಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ರಾಹುಲ್ ಗಾಂಧಿ ಹೋಗಿದ್ದರು.

ಶುಕ್ರವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ರಾಹುಲ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ ವಾದಿಸಿದರು. ಅಸಲಿಗೆ ದೂರು ಸಲ್ಲಿಸಿರುವ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ, ಮೂಲ ಉಪನಾಮ ಮೋದಿಯೇ ಅಲ್ಲ ಎಂದು ವಾದ ಮಂಡಿಸಿದರು. ರಾಹುಲ್ ಗಾಂಧಿ ಭಾಷಣದಲ್ಲಿ ಸೂಚಿಸಿದ ಹೆಸರಿನ ಒಬ್ಬ ವ್ಯಕ್ತಿಯೂ ಕೇಸ್ ದಾಖಲಿಸಿಲ್ಲ. ಆದರೆ, ಮೂಲ ಉಪನಾಮ ಮೋದಿ ಎಂದಿರದ ಬಿಜೆಪಿ ಮಾಜಿ ಸಚಿವ ಪೂರ್ಣೇಶ್ ಮೋದಿ ದೂರು ಸಲ್ಲಿಸಿರುವುದು ವಿಚಿತ್ರ ಎಂದರು.

ಈ ಕುರಿತು ತೀರ್ಪು ನೀಡಿದ ನ್ಯಾಯಮೂರ್ತಿ ಬಿ.ಆರ್ ಗವಾಯಿ, ಗಾಂಧಿಯವರಿಗೆ ವಿಧಿಸಿದ ಶಿಕ್ಷೆಯ ಪ್ರಮಾಣ ವ್ಯಾಪಕ ಪರಿಣಾಮ ಬೀರಲಿದೆ. ಇದು ಅವರನ್ನು ಆಯ್ಕೆ ಮಾಡಿದ ಮತದಾರರ ಹಕ್ಕಿನ ಮೇಲೆ ಪರಿಣಾಮ ಬೀರುತ್ತೆ ಎಂದಿದ್ದಾರೆ. ಅಂತಿಮ ತೀರ್ಪು ಬರುವ ತನಕ ಗುಜರಾತ್ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಲಾಗಿದೆ. ಹೀಗಾಗಿ ಅನರ್ಹತೆಗೊಂಡಿದ್ದ ಅವರ ಸಂಸದ ಸ್ಥಾನ ಮರು ಸ್ಥಾಪಿಸಲಾಗಿದ್ದು, ಸಂಸತ್ತಿಗೆ ಮರು ಪ್ರವೇಶಿಸಲಿದ್ದಾರೆ. ಮುಂದಿನ ವರ್ಷದ ಚುನಾವಣೆಯಲ್ಲಿಯೂ ಸ್ಪರ್ಧಿಸಬಹುದಾಗಿದೆ.




Leave a Reply

Your email address will not be published. Required fields are marked *

error: Content is protected !!