ಮೊಹರೆ ಚಿರಸ್ಥಾಯಿಗಾಗಿ ಶುರುವಾಯ್ತು ಹೋರಾಟ

605

ಪ್ರಜಾಸ್ತ್ರ ಸುದ್ದಿ

ದೇವರಹಿಪ್ಪರಗಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣದಲ್ಲಿ, ಮೊಹರೆ ಹಣಮಂತರಾಯ ಸಂಸ್ಮರಣೆ ವೇದಿಕೆ ವತಿಯಿಂದ ಇಂದು ಮೆರವಣಿಗೆ ನಡೆಸಲಾಯ್ತು. ಪಟ್ಟಣದಲ್ಲಿರುವ ಮೊಹರೆ ಹಣಮಂತರಾಯ ಸರ್ಕಲ್ ನಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ತಹಶೀಲ್ದಾರ್ ಕಚೇರಿವರೆಗೂ ಮೆರವಣಿಗೆ ನಡೆಸಲಾಯ್ತು.

ಮೊಹರೆ ಹಣಮಂತರಾಯ ಅವರ ಹೆಸರಿನಲ್ಲಿ ಗ್ರಂಥಾಲಯ, ಸಭಾ ಭವನ, ವಿಜಯಪುರ ಅಕ್ಕಮಹಾದೇವಿ ವಿವಿಯ ಪತ್ರಿಕೋದ್ಯಮ ವಿಭಾಗಕ್ಕೆ ಮೊಹರೆ ಅವರ ಹೆಸರು, ಇವರ ಹೆಸರಿನಲ್ಲಿ ರಾಜ್ಯ ಸರ್ಕಾರ ನೀಡುವ ಪ್ರಶಸ್ತಿಯನ್ನ ಎರಡು ವರ್ಷಕ್ಕೊಮ್ಮೆಯಾದರೂ ಹುಟ್ಟೂರಾದ ದೇವರಹಿಪ್ಪರಗಿಯಲ್ಲಿ ಪ್ರಧಾನ ಮಾಡುವ ಕಾರ್ಯಕ್ರಮ ಆಯೋಜಿಸಬೇಕು ಅನ್ನೋ ನಾಲ್ಕು ಪ್ರಮುಖ ಬೇಡಿಕೆಗಳ ಈಡೇರಿಕಾಗಾಗಿ ಮೆರವಣಿಗೆ ನಡೆಸಲಾಯ್ತು.

ಈ ವೇಳೆ ಮಾತ್ನಾಡಿದ ಡಾ.ಆರ್.ಆರ್ ನಾಯಕ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ 6 ವರ್ಷ ಜೈಲು ಶಿಕ್ಷೆ ಅನುಭವಿಸಿದ್ರು. ತಮ್ಮ ಬರವಣಿಗೆ ಮೂಲಕ ಜನರಲ್ಲಿ ದೇಶಾಭಿಮಾನ ತುಂಬಿದ್ರು. ನಾಡಿನ ಪತ್ರಿಕಾರಂಗದಲ್ಲಿ ಬಹುದೊಡ್ಡ ಸಾಧನೆ ಮಾಡಿದ ಮೊಹರೆ ಅವರಿಗೆ ನೆಹರು, ಸರ್ವಪಲ್ಲಿ ರಾಧಾಕೃಷ್ಣ ಸೇರಿದಂತೆ ಅನೇಕ ಗಣ್ಯರ ಒಡನಾಟವಿತ್ತು. ಇಂಥಾ ಸಾಧಕನನ್ನ ಸ್ಮರಿಸುವ ಕೆಲಸ ಹುಟ್ಟೂರಿನಲ್ಲಿ ಇದುವರೆಗೂ ಆಗದಿರುವುದು ನೋವಿನ ಸಂಗತಿ. ಇನ್ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ಕೊಡದೆ ಮೊಹರೆ ಅವರ ಹೆಸರು ಉಳಿಸುವ ಕೆಲಸವನ್ನ ನಾವೆಲ್ಲ ಮಾಡೋಣ ಎಂದರು. ಪಟ್ಟಣ ಪಂಚಾಯ್ತಿ ಸದಸ್ಯ ಗಡೇದ, ಗುರುರಾಜ ದೇಸಾಯಿ ಸೇರಿ ಹಲವರು ಮಾತ್ನಾಡಿದ್ರು. ನಂತರ ತಹಶೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯ್ತು.

ಈ ವೇಳೆ ಶ್ರೀಧರ ನಾಡಗೌಡ, ಸಾಲಕ್ಕಿ, ಮಹಾಂತೇಶ ವಂದಾಲ, ರಮೇಶ ಮಸಬಿನಾಳ, ಕಾಶಿನಾಥ ರಾಠೋಡ, ಮೊಹರೆ ಹಣಮಂತರಾಯ ಸಂಸ್ಮರಣೆ ವೇದಿಕೆ ಅಧ್ಯಕ್ಷ ದಿನೇಶಗೌಡ ಪಾಟೀಲ, ಉಪಾಧ್ಯಕ್ಷ ಕಾಶಿನಾಥ ಕೋರಿ, ಸಿದ್ಧಾರ್ಥ ರೂಗಿ, ಕಾರ್ಯದರ್ಶಿ ಸಂತೋಷ ಕುಲಕರ್ಣಿ, ಸಹಕಾರ್ಯದರ್ಶಿಗಳಾದ ಶಂಕರ ಜಮಾದಾರ, ಕಾಶಿನಾಥ ಅಗಸರ, ಖಜಾಂಚಿ ಮಿಯಾಜ ಯಲಗಾರ, ಸದಸ್ಯರಾದ ಸಂತೋಷ ಯಳಕೋಟಿ, ಕಲ್ಮೇಶ ಬುದ್ನಿ, ಶಂಕರಗೌಡ ಪಾಟೀಲ, ಈರಣ್ಣ ವಡ್ಡೋಡಗಿ, ಸಲಬಯ್ಯ ಸದಯ್ಯನಮಠ, ಯಮನಪ್ಪ ದೇವಣಗಾಂವ, ಆರೂರು ಗೆಳೆಯರ ಬಳಗ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!