ಗುಮ್ಮಟನಗರಿಯಲ್ಲಿ 14 ಲಕ್ಷ ಮೌಲ್ಯದ ಮಾದಕ ವಸ್ತು ನಾಶ

221

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ವಿವಿಧ ಕಡೆ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದ್ದ ಬರೋಬ್ಬರಿ 14 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ನಾಶ ಮಾಡಲಾಗಿದೆ. ಎಸ್ಪಿ ಅನುಪಮ ಅರ್ಗಾವಲ್ ನೇತೃತ್ವದಲ್ಲಿ, ನಗರ ಪಾಲಿಕೆಯ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಾದಕ ವಸ್ತುಗಳನ್ನ ನಾಶ ಪಡಿಸಲಾಯ್ತು.

ಎನ್ ಡಿಪಿಎಸ್ ಅಡಿಯಲ್ಲಿ ಜಿಲ್ಲೆಯ ವಿವಿಧ ಕಡೆ 40 ಪ್ರಕರಣಗಳು ದಾಖಲಾಗಿದ್ವು. ಇದ್ರಿಂದ 302 ಕೆಜಿ 871 ಗ್ರಾಂ ಗಾಂಜಾವನ್ನ ನಾಶ ಪಡಿಸಲಾಗಿದೆ. ಅದೆ ರೀತಿ ಒಂದು ಪ್ರಕರಣದಲ್ಲಿ ವಶಪಡಿಸಿಕೊಮಡಿದ್ದ 45.5 ಕೆಜಿ ಅಫೀಮು ಸಹ ನಾಶ ಪಡಿಸಲಾಯ್ತು. ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಮಾದಕ ವಸ್ತುಗಳನ್ನ ನಾಶ ಪಡಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!