ದಸರಾ ಪೋಸ್ಟರ್ ಮತ್ತು ವೆಬ್ ಸೈಟ್ ಲಾಂಚ್

359

ಮೈಸೂರು: 2019ರ ದಸರಾ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಮೈಸೂರಿನಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ಇದರ ನಡುವೆ ಇಂದು ದಸರಾ ಪೋಸ್ಟರ್ ಮತ್ತು ವೆಬ್ ಸೈಟ್ ಲಾಂಚ್ ಮಾಡಲಾಯ್ತು. ಮೈಸೂರು ಉಸ್ತುವಾರಿ ಸಚಿವ ವಿ ಸೋಮಣ್ಣ ಮತ್ತು ಶಾಸಕ ರಾಮದಾಸ ಚಾಲನೆ ನೀಡಿದ್ರು.

ಮೈಸೂರಿನ ಜಲದರ್ಶಿನಿಯಲ್ಲಿ ಪೋಸ್ಟರ್ ಮತ್ತು ಅಧಿಕೃತ ವೆಬ್ ಸೈಟ್ ಬಿಡುಗಡೆ ಮಾಡಲಾಯ್ತು. ಈ ವೇಳೆ ಮೈಸೂರು ಸಂಸದ ಪ್ರತಾಪ ಸಿಂಹ, ಶಾಸಕ ನಾಗೇಂದ್ರ ಸೇರಿದಂತೆ ಅಧಿಕಾರಿ ವರ್ಗ ಭಾಗವಹಿಸಿತ್ತು. ಸಚಿವ ಸ್ಥಾನ ಸಿಗದಿರುವುದಕ್ಕೆ ದಸರಾ ಕಾರ್ಯಕ್ರಮಗಳಿಂದ ದೂರು ಉಳಿದಿದ್ದ ಶಾಸಕ ರಾಮದಾಸ ಇಂದು ವೆಬ್ ಸೈಟ್ ಬಿಡುಗಡೆ ಮಾಡಿದ್ರು.




Leave a Reply

Your email address will not be published. Required fields are marked *

error: Content is protected !!