ಜನಮನ ಗೆದ್ದ ಜಿ.ಚಂದ್ರಕಾಂತ್ ಅವರ ಗಜಲ್ ಗಾಯನ

189

ಪ್ರಜಾಸ್ತ್ರ ಸುದ್ದಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಜಿ.ಚಂದ್ರಕಾಂತ್ ಅವರ ಗಜಲ್ ಗಾಯನ ಜನಮನ ಗೆದ್ದಿದೆ. ನಗರದ ರಮಾಗೋವಿಂದ ರಮಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಜಲ್ ಮೋಡಿ ಮಾಡಿತು.

ಭೂಪಿಂದರ್ ಸಿಂಗ್ ಅವರ ರಚನೆಯ ಆಸಮಾಂ ಸೇ ಉತಾರಾ ಗಯಾ ಗಜಲ್ ಅನ್ನು ದರ್ಬಾರಿ ರಾಗದಲ್ಲಿ, ಸುದರ್ಶನ ಫಾಕಿ ಅವರ ಶಾಯದ್ ಮೈಂ ಜಿಂದಗಿ ಕೀ ಅನ್ನು ಪಾಲಕಂಸ ರಾಗದಲ್ಲಿ, ಡಾ.ರಹೀಂ ಮಾಸೂಮ್ ರಾಜ್ ಅವರ ಅಜನಬಿ ಶಹರ್ ಕೇ ಅಜನಬಿ ದಾಸತಾಂ ಮೇರಿ ಗಜಲ್ ಅನ್ನು ಮಿಶ್ರ ಭೈರವಿ ರಾಗದಲ್ಲಿ, ಜನಾಬ್ ಮುನ್ವರ್ ಬದಾಯೂನಿ ಅವರ ನಾ ಕಹೀಂ ಸೇ ದೂರ್ ಹೈ ಮಂಜಿಲೇಂ ಗಜಲ್ ಅನ್ನು ಭೈರವಿ ರಾಗದಲ್ಲಿ ಹಾಡುವ ಮೂಲಕ ನೆರದಿದ್ದ ಸಂಗೀತ ಪ್ರೇಮಿಗಳ ಮನಸ್ಸನ್ನು ಅರಳಿಸಿದರು.

ಗಾಯಕ ಜಿ.ಚಂದ್ರಕಾಂತ್ ಅವರಿಗೆ ಡಿ.ಎನ್ ಇಂದ್ರಕುಮಾರ್ ಕೀಬೋರ್ಡ್, ಗುರುನಾಥ್ ವಿಶ್ವಕರ್ಮ ತಬಲಾ ಸಾಥ್ ನೀಡಿದರು. ಕಲಬುರಗಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾಗಿರುವ ಜಿ.ಚಂದ್ರಕಾಂತ್ ಅವರು ಅದ್ಭುತ್ ಗಜಲ್ ಗಾಯಕರಾಗಿಯೂ ಖ್ಯಾತಿ ಗಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!