ಪಂಚಮಿಗೆ ರುಚಿ ರುಚಿ ತಿನಿಸು ಸಿದ್ಧ

483

ಪ್ರಜಾಸ್ತ್ರ ಸುದ್ದಿ

ಸಿಂದಗಿ: ನಾಗರ ಪಂಚಮಿ ಹಬ್ಬ ಬಂತಂದರೆ ಮನೆಯಲ್ಲಿ ತರಹೇವಾರಿ ತಿಂಡಿಗಳನ್ನು ಮಾಡಲಾಗುತ್ತೆ. ಸೋಮವಾರ ಹಾಗೂ ಮಂಗಳವಾರ ಹಬ್ಬ ಇರುವುದರಿಂದ ಸಿಂದಗಿಯ ಜನತೆ ಹತ್ತು ಹಲವು ಬಗೆಯ ತಿನಿಸುಗಳನ್ನು ಮಾಡುತ್ತಿದ್ದಾರೆ.

ರವೆ ಉಂಡಿ, ಬೇಸನ್ ಉಂಡಿ, ಶಂಕರಪಾಳೆ, ಚಕ್ಕಲಿ, ಕರಚಿಕಾಯಿ, ಶೇಂಗಾ ಉಂಡಿ, ಕರದಂಟು, ಅವಲಕ್ಕಿ, ಚುರುಮುರಿ ಸೇರಿದಂತೆ ಹೀಗೆ ವಿವಿಧ ರೀತಿಯ ತಿನಿಸುಗಳನ್ನು ಮಾಡಲಾಗುತ್ತಿದೆ. ಸೋಮವಾರ ಒಳಗಿನ ಹಾಲು ಎರೆಯಲಾಗುತ್ತೆ. ಮಂಗಳವಾರ ಹೊರಗಿನ ಹಾಲು ಎರೆಯುವ ಮೂಲಕ ಹಬ್ಬ ಆಚರಿಸಲಾಗುತ್ತೆ.

ಪಂಚಮಿ ಹಬ್ಬದ ನಂತರ ಬಂಧು ಬಳಗದವರಿಗೆ ಹಬ್ಬದ ತಿನಿಸುಗಳನ್ನು ವಿನಿಮಯ ಮಾಡಲಾಗುತ್ತೆ. ಈ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ನಾಗರ ಪಂಚಮಿ ವಿಶೇಷವಾಗಿ ಆಚರಿಸಲಾಗುತ್ತೆ. ವಿಶೇಷ ತಿಂಡಿ ತಿನಿಸುಗಳಿಂದಾಗಿ ಮಕ್ಕಳಿಗೆ ಈ ಹಬ್ಬ ಬಲು ಪ್ರಿಯವಾಗಿದೆ.




Leave a Reply

Your email address will not be published. Required fields are marked *

error: Content is protected !!