ರಂಗಾಯಣ ಸ್ಥಾಪಕ ಬಿ.ವಿ ಕಾರಂತರ ಜನುಮ ದಿನಕ್ಕೆ ಒಂದಿಷ್ಟು ನೆನಪು

372

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಬಿ.ವಿ ಕಾರಂತ ಅಂದ್ರೆ ಸಾಕು ಇಡೀ ರಂಗಭೂಮಿಯೇ ಅವರನ್ನ ನಮಿಸುತ್ತೆ. ಕನ್ನಡ ಹಾಗೂ ಹಿಂದಿಯಲ್ಲಿ ರಂಗಭೂಮಿಯನ್ನ ಬಹುದೊಡ್ಡ ಮಟ್ಟಕ್ಕೆ ಬೆಳೆಸಿದ ಕೀರ್ತಿ ಇವರದು. ಇಂದು ಅವರ 91ನೇ ಜನುಮ ದಿನ. ಸೆಪ್ಟೆಂಬರ್ 19, 1929ರಲ್ಲಿ ಬಿ.ವಿ ಕಾರಂತರು ಜನಿಸಿದ್ರು. ಬಾಲ್ಯದಲ್ಲಿಯೇ ನಾಟಕದತ್ತ ಒಲವು ಬೆಳೆಸಿಕೊಂಡ ಕಾರಂತರು, 3ನೇ ಕ್ಲಾಸ್ ಓದುವಾಗ್ಲೇ ನಾಟಕದಲ್ಲಿ ಅಭಿನಯಿಸಿದ್ರಂತೆ.

ಮುಂದೆ ಗುಬ್ಬಿ ವೀರಣ್ಣ ನಾಟಕ ಮಂಡಳಿ ಸೇರಿದ್ರು. ಗುರು ವೀರಣ್ಣನವರ ಮಾತಿನಂತೆ ಬನಾರಸ್ ಗೆ ಹೋಗಿ ಮಾಸ್ಟರ್ ಪದವಿ ಪಡೆದ್ರು. ಬಳಿಕ ಸಿಲಿಕಾನ್ ಸಿಟಿಗೆ ಬಂದು ಬೆನಕ ಅನ್ನೋ ತಂಡ ಕಟ್ಟಿದ್ರು. ರಂಗಭೂಮಿಯಲ್ಲಿ ಸದಾ ಹೊಸ ಹೊಸ ಪ್ರಯೋಗಗಳನ್ನ ಮಾಡುತ್ತಾ ಕಲಾರಸಿಕರ ಮನಸ್ಸು ಗೆದ್ದರು. ರಂಗಭೀಷ್ಮನಾದ್ರು. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಇವರನ್ನ ಬರಮಾಡಿಕೊಂಡಿತು.

ಸಿನಿಮಾ ಕ್ಷೇತ್ರದಲ್ಲಿ ಪಯಣಿಸಿದ್ರು. ಕಾರಂತರ ಚೋಮನ ದುಡಿ, ಯು.ಆರ್ ಯನಂತಮೂರ್ತಿ ಅವರ ಘಟಶ್ರಾದ್ಧ, ಗಿರೀಶ ಕಾರ್ನಾಡರ ವಂಶವೃಕ್ಷ, ಎಸ್.ಎಲ್ ಭೈರಪ್ಪರ ತಬಲಿಯು ನೀನಾದೆ ಮಗನೆ ಕಾದಂಬರಿಯ ಸಿನಿಮಾಗಳಲ್ಲಿ ಕೆಲಸ ಮಾಡಿದ್ರು. ಈ ಎಲ್ಲ ಸಿನಿಮಾಗಳು ರಾಷ್ಟ್ರ ಪ್ರಶಸ್ತಿ ಪಡೆದವು. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿ ಅನ್ನೋ ಪುಟ್ಟ ಊರಿನ ಬಿ.ವಿ ಕಾರಂತ, ದೇಶವ್ಯಾಪಿ ಹೆಸರು ಮಾಡಿದರು. ರಂಗಾಯಣ ಸ್ಥಾಪನೆ ಮಾಡುವ ಮೂಲಕ ರಂಗಭೂಮಿಯನ್ನ ಬಾನೆತ್ತರಕ್ಕೆ ಹಾರುವಂತೆ ಮಾಡಿ, ಸೆಪ್ಟೆಂಬರ್ 1, 2002ರಲ್ಲಿ ನಿಧನರಾದ್ರು.




Leave a Reply

Your email address will not be published. Required fields are marked *

error: Content is protected !!