ಬ್ರೇಕಿಂಗ್ ನ್ಯೂಸ್: ತಾಳಿಕೋಟಿಯಲ್ಲಿ ಲಕ್ಷಾಂತರ ಮೌಲ್ಯದ ಗಾಂಜಾ ಜಪ್ತಿ

637

ಪ್ರಜಾಸ್ತ್ರ ಬ್ರೇಕಿಂಗ್ ನ್ಯೂಸ್

ವಿಜಯಪುರ: ಜಿಲ್ಲೆಯ ನೂತನ ತಾಲೂಕು ತಾಳಿಕೋಟಿಯ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಲಕ್ಷಾಂತರ ಮೌಲ್ಯದ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಎರಡು ಕಡೆ ಪ್ರತ್ಯೇಕವಾಗಿ ದಾಳಿ ನಡೆಸಿದ ಪೊಲೀಸರು ಅಪಾರ ಪ್ರಮಾಣದ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಪ್ರತ್ಯೇಕವಾಗಿ ಚವನಬಾವಿಯಲ್ಲಿ ಎರಡು ಕಡೆಗೆ ನಡೆಸಿದ ದಾಳಿಯಲ್ಲಿ 75 ಕೆಜಿ ಹಸಿ ಗಾಂಜಾ ಜಪ್ತಿಯಾಗಿದೆ. ಆರೋಪಿ ಭೀಮಣ್ಣ ತುರಡಗಿ ಜಮೀನಿನಲ್ಲಿ 55 ಕೆಜಿ ಗಾಂಜಾ ಜಪ್ತಿಯಾದ್ರೆ, ಕೇಶಪ್ಪ ಈಳಿಗೇರ ಜಮೀನಿನಲ್ಲಿ 20 ಕೆಜಿ ಗಾಂಜಾ ಸಿಕ್ಕಿದೆ.

ಇಬ್ಬರು ಆರೋಪಿಗಳ ಸಮೇತ 75 ಕೆಜಿ ಹಸಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಬಸವನಬಾಗೇವಾಡಿ ಡಿವೈಎಸ್ಪಿ ಈ. ಶಾಂತವೀರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ಸಂಬಂಧ ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!