ಎನ್ ಸಿಪಿ ಮುಖಂಡರ ಸಭೆ: ಶಿವಸೇನೆ ಬೇಕಾ ಬೇಡ್ವಾ ಚರ್ಚೆ

639

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಹಗ್ಗಜಗ್ಗಾಟ ಇನ್ನು ಮುಂದುವರೆದಿದೆ. ಇದನ್ನ ನೋಡ್ತಿರುವ ಜನಕ್ಕೆ ಅಸಹ್ಯವೆನಿಸ್ತಿದೆ. ಚುನಾವಣೆ ಪೂರ್ವದಲ್ಲಿ ಮೈತ್ರಿಕೊಂಡಿರುವ ಪಕ್ಷಗಳು ಸರ್ಕಾರ ರಚನೆ ಮಾಡುವ ಬದ್ಲು, ರಾಜಕೀಯ ನಾಟಕವಾಡ್ತಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಇದರ ನಡುವೆ ಕಾಂಗ್ರೆಸ್ ಜೊತೆ ಚರ್ಚಿಸಿದ ಬಳಿಕವಷೇ ಅಂತಿಮ ತೀರ್ಮಾನ ಅಂತಿದ್ದಾರೆ ಎನ್ ಸಿಪಿ ನಾಯಕ ಶರದ ಪಾವರ.

ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರೂ ಶಿವಸೇನೆ ಜೊತೆಗಿನ ಗುದ್ದಾಟದಿಂದಾಗಿ ಸರ್ಕಾರ ರಚನೆ ಮಾಡಲು ಸರ್ಕಸ್ ಮಾಡ್ತದೆ. ಹೀಗಾಗಿ ಎನ್ ಸಿಪಿ ಮುಖಂಡರ ಸಭೆ ಕರೆದಿದ್ದು ರಾಜಕೀಯ ಬೆಳವಣಿಗೆ ಕುರಿತು ಚರ್ಚೆ ನಡೆಸಲಾಗ್ತಿದೆ. ಶಿವಸೇನಾ ಮುಖಂಡ ಕೇಂದ್ರ ಸಚಿವ ಅರವಿಂದ ಸಾವಂತ ರಾಜೀನಾಮೆ ನೀಡುವ ವಿಚಾರ ಪ್ರಸ್ತಾಪಿಸಿದ್ದಾರೆ.

ಪ್ರಫುಲ ಪಟೇಲ, ಅಜೀತ ಪವಾರ. ಜಯಂತ ಪೇಟಲ, ಸುಪ್ರಿಯಾ ಸುಳೆ ಸೇರಿದಂತೆ ಅನೇಕ ಮುಖಂಡರು ಸೇರಿಕೊಂಡು ಸಭೆ ನಡೆಸಿದ್ದಾರೆ. ಶಿವಸೇನೆ ಜೊತೆ ಹೋಗಬೇಕಾ ಬೇಡ್ವಾ ಅನ್ನೋ ಕುರಿತು ಚರ್ಚೆ ನಡೆದಿದೆ. ಇದ್ರಿಂದಾಗಿ ಮಹಾ ನಾಡಿನಲ್ಲಿ ದಿನಕೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.




Leave a Reply

Your email address will not be published. Required fields are marked *

error: Content is protected !!