ಸಿದ್ದಗಂಗಾ ಶ್ರೀಗಳ ಗದ್ದುಗೆ ಮೇಲೆ ಶಿವಲಿಂಗ ಪ್ರತಿಷ್ಠಾಪನೆ

333

ತುಮಕೂರು: ಶಿವೈಕ್ಯ ಶ್ರೀ ಸಿದ್ದಗಂಗಾ ಶಿವಕುಮಾರ ಶ್ರೀಗಳ ಗದ್ದುಗೆ ಸ್ಥಳದ ಮೇಲೆ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಇಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀಗಳ ಗದ್ದುಗೆ ಪೀಠದ ಮೇಲೆ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಯ್ತು.

ಹಳೆ ಮಠದಲ್ಲಿ ಮಂಡಳದ 48 ದಿನಗಳ ಕಾಲ ಜಲಾದಿವಸ, ಧಾನ್ಯಾದಿವಸ, ಪುಷ್ಪಾದಿವಸ, ಹಾಗೂ ಶಯನಾದಿವಸದ ವಿಧಿವಿಧಾನಗಳನ್ನ ಪೂರೈಸಲಾಗಿತ್ತು. ಸಕಲ ಪೂಜಾ ಕೈಂಕರ್ಯಗಳನ್ನ ಮುಗಿಸದ ಬಳಿಕ ಲಿಂಗವನ್ನ ಪ್ರತಿಷ್ಠಾಪನೆ ಮಾಡಲಾಗಿದೆ.

ಶಿವಲಿಂಗವೂ 27 ಉಂಚ ಉದ್ದವಿದೆ. ಪಾನ ಬಟ್ಟಲು ಸೇರಿ ಪೂರ್ಣ ಲಿಂಗ 38 ಇಂಚು ಇದೆ. ನಾಡಿನ ಅನೇಕ ಭಾಗದಿಂದ ಬಂದಿದ್ದ ಭಕ್ತಾಧಿಗಳು ಈ ಒಂದು ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಶಿವಲಿಂಗ ದರ್ಶನ ಮಾಡಿದ್ರು.




Leave a Reply

Your email address will not be published. Required fields are marked *

error: Content is protected !!