ಕರೋನಾ ವೈರಸ್ ಕೊಲ್ಲುತ್ತಾ ಈ ಸಾವಯವ ದ್ರಾವಣ?

416

ಪ್ರಜಾಸ್ತ್ರ ವಿಶೇಷ ವರದಿ

ಹುಬ್ಬಳ್ಳಿ: ಭಾರತದ ಮಣ್ಣಿನ ಕಣ ಕಣದಲ್ಲಿಯೂ ಔಷಧೀಯ ಗುಣಗಳಿವೆ. ಸಾಧು, ಸಂತರು, ಋಷಿಮುನಿಗಳು ಇದನ್ನ ಸಾಧಿಸಿ ತೋರಿಸಿದ್ದಾರೆ. ಹೀಗಾಗಿ ಇಂದಿಗೂ ನಮ್ಮಲ್ಲಿ ಸಾವಯವ ಔಷಧಿ, ಗಿಡಮೂಲಿಕೆ ಮದ್ದು ಸೇರಿದಂತೆ ಆರ್ಯುವೇಧಿಕ ಮೂಲಿಕೆಗಳು ಬಳಕೆಯಲ್ಲಿವೆ. ಇದೆ ಮಾದರಿಯಲ್ಲಿ ಕರೋನಾ ಸೇರಿದಂತೆ ವಿವಿಧ ಅಪಾಯಕಾರಿ ವೈರಸ್ ಮತ್ತು ಬ್ಯಾಕ್ಟೀರಿಯಾ ನಾಶಪಡಿಸುವ ಸಂಪೂರ್ಣ ನೈಸರ್ಗಿಕ (ಗಿಡಮೂಲಿಕೆಯ) ನೀಮ್ ಟೆಕ್ ಎಂಬ ಸಂಸ್ಥೆ ದ್ರಾವಣ ಕಂಡು ಹಿಡಿದಿದೆ ಎಂದು ಹೇಳಲಾಗ್ತಿದೆ.

ಹುಬ್ಬಳ್ಳಿಯ ಮೂಲದ ನೀಮ್‌ ಟೆಕ್ ಸಂಸ್ಥೆಯ ಮಾಲೀಕ ಋತಿಕ ಸುಬ್ರಮಣ್ಯ ಎಂಬುವರೇ ಈ ಪರಿಸರ ಸ್ನೇಹಿ ಮತ್ತು ನೈಸರ್ಗಿಕ ದ್ರಾವಣದ ರೂವಾರಿಗಳು. ನೀಮ್ ಟೆಕ್ ದ್ರಾವಣವನ್ನ ಕೇಂದ್ರ ಸರ್ಕಾರದ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಎನ್‌ಎಬಿಎಲ್ ಅಕ್ರಿಡೆಟೆಡ್ ಪ್ರಮಾಣಪತ್ರ ಪಡೆದಿದೆ. ಇದರಲ್ಲಿ ಶೇಕಡ 100ರಷ್ಟು ಪರಿಣಾಮಕಾರಿ ಹಾಗೂ ಪರಿಸರ ಸ್ನೇಹಿ ದ್ರಾವಣವಿದೆ ಎಂದು ತಿಳಿದು ಬಂದಿದೆ.

ವೈರಸ್ ಮತ್ತು ಬ್ಯಾಕ್ಟೀರಿಯಾ ನಾಶಕ ತಯಾರಿಸುವುದು ನಮ್ಮ ಮುಖ್ಯ ಗುರಿಯಾಗಿತ್ತು. ನೀಮ್‌ ಟೆಕ್ ಉತ್ಪನ್ನದ ದ್ರಾವಣ ಅನೇಕ ವೈರಸ್ ಕೊಲ್ಲಲು ಸಹಕಾರಿಯಾಗಿದೆ. ಸಂಪೂರ್ಣ ನೈಸರ್ಗಿಕ ವಸ್ತುಗಳನ್ನ ಬಳಸಿ ಮೇಕ್‌ ಇನ್ ಇಂಡಿಯಾದಡಿ ತಯಾರಿಸಿರುವ ನೀಮ್‌ ಟೆಕ್ ಹಾಗೂ ಸೇಫ್ ಹ್ಯಾಂಡ್ ಸಾನಿಟೈಸರ್ ಇದಾಗಿದೆ.

ಋತ್ವೀಕ ಸುಬ್ರಮಣ್ಯ, ನೀಮ್ ಟೆಕ್ ಸಂಸ್ಥೆ ಮಾಲೀಕ

ಅಡುಗೆ ಮನೆ, ಆವರಣ ಹಾಗೂ ಆಹಾರ ಪದಾರ್ಥಗಳನ್ನ ಇಡುವ ಸ್ಥಳ ಸೇರಿದಂತೆ ಎಲ್ಲೆಡೆ ಈ ದ್ರಾವಣ ಯಾವುದೇ ಅಪಾಯವಿಲ್ಲದೇ ಬಳಸಬಹುದಂತೆ. ನೀಮ್‌ ಟೆಕ್ ದ್ರಾವಣದಿಂದ ಕೇವಲ 2 ರಿಂದ 3 ನಿಮಿಷದಲ್ಲಿ ಶೇಕಡ 99ರಷ್ಟು ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನ ಯಾವುದೇ ಅಡ್ಡಪರಿಣಾಮವಿಲ್ಲದೇ, ನಾಶಪಡಿಸುತ್ತದೆ. ಈ ನಾಶಕವು ಯಾವುದೇ ವಾಸನೆಯಿಲ್ಲದೆ ಹಾಗೂ ಅತೀ ಕಡಿಮೆ ಬೆಲೆಯಲ್ಲಿ ದೊರೆಯುತ್ತೆ ಎಂದು ಋತಿಕ ತಿಳಿಸುತ್ತಾರೆ.

ನಾವು ಬಳಸುತ್ತಿರುವ ಸಾನಿಟೈಸರ್ ಅನೇಕ ರಾಸಾಯನಿಕ ಹಾಗೂ ಅಲ್ಕೋಹಾಲ್ ಅಂಶಯುಕ್ತವಾಗಿದೆ. ಆಲ್ಕೋಹಾಲಿಕ್ ಸಾನಿಟೈಸರ್ ಬಳಸಿದ ಅನೇಕರಿಗೆ ವಾಸನಾಗ್ರಹಿಕೆ ಮತ್ತು ಚರ್ಮದ ಅಲರ್ಜಿ ಉಂಟಾದ ಉದಾಹರಣೆ ಇದೆ. ಇದನ್ನ ತಪ್ಪಿಸುವ ನಿಟ್ಟಿನಲ್ಲಿ ಋತಿಕ ಮತ್ತವರ 30 ಜನರ ತಂಡ ಸಾವಯವ ಸಾನಿಟೈಸರ್ ಸಿದ್ಧ ಪಡಿಸಿದೆ. ಅಲೋವಿರಾ, ಮೆಂತಾಲ್, ಲವಂಗದ ಎಣ್ಣೆ, ಅರಿಶಿನ, ಶುಂಠಿ, ಬೇವು ಮತ್ತು ಪುದೀನಾ ಬಳಸಿ ಹರ್ಬಲ್  ಹ್ಯಾಡ್ ಸಾನಿಟೈಸರ್ ಸಿದ್ಧಪಡಿಸಿದ್ದಾರೆ.

ಈ ಮೂಲಕ ನೀಮ್ ಸಂಸ್ಥೆ ಸಿದ್ಧಪಡಿಸಿದ ದ್ರಾವಣ ಸಾವಯವ ಆಗಿದ್ದು, ಆರೋಗ್ಯಕ್ಕೆ ಒಳ್ಳೆಯದ್ದು ಎಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!