ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ
ಕಠ್ಮಂಡು: ನಾಲ್ವರು ಭಾರತೀಯರು, ಮೂವರು ಜಪಾನಿಯರು ಸೇರಿದಂತೆ 22 ಪ್ರಯಾಣಿಕರಿದ್ದ ನೇಪಾಳದ ವಿಮಾನವೊಂದು ಇಂದು ನಾಪತ್ತೆಯಾಗಿದೆ. ಪೋಕ್ರಾದಿಂದ ಹೊರಟಿದ್ದ ವಿಮಾನ ಜಾಮ್ ಸೂನ್ ತಲುಪಬೇಕಿತ್ತು. ಆದರೆ, ಅಲ್ಲಿಗೆ ಹೋಗದೆ ನಾಪತ್ತೆಯಾಗಿದೆ.
ನೇಪಾಳ ಗೃಹ ಇಲಾಖೆ ವಿಮಾನ ಪತ್ತೆಗೆ ಹೆಲಿಕಾಪ್ಟರ್ ನಿಯೋಜಿಸಿದೆ. ಇದರ ಜೊತೆಗೆ ಸೇನಾ ವಿಮಾನಗಳು ಸಹ ನಾಮಪತ್ತೆಯಾದ ವಿಮಾನ ಹುಡುಕಾಟ ನಡೆಸಿವೆ.