ಹೊಸ ವರ್ಷಾಚರಣೆ: ಸಿಲಿಕಾನ್ ಸಿಟಿಯಲ್ಲಿ ಅದೇ ರಾಗ ಅದೇ ಹಾಡು..

352

ಬೆಂಗಳೂರು: ಹೊಸ ವರ್ಷದ ಸಂಭ್ರಮವನ್ನ ಸಿಲಿಕಾನ್ ಸಿಟಿಯಲ್ಲಿ ಭರ್ಜರಿಯಾಗಿ ಮಾಡಲಾಗುತ್ತೆ. ಈ ಬಗ್ಗೆ ಪೊಲೀಸ್ರು ಎಷ್ಟೇ ಬಂದೋಬಸ್ತಿ ಮಾಡಿದ್ರೂ ಒಂದಲ್ಲ ಒಂದು ಅಹಿತಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಮಂಗಳವಾರ ಮತ್ತೆ ಲೈಂಗಿಕ ಕಿರುಕುಳ ನಡೆದಿದೆ.

ಕೋರಮಂಗಲದಲ್ಲಿ ಯುವಕರ ಗುಂಪೊಂದು ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದೇ ರೀತಿ ಇನ್ನೊಂದ್ಕಡೆ ಘಟನೆ ನಡೆದಿದ್ದು ಪಾರ್ಟಿ ಮುಗಿಸಿ ಮನೆಗೆ ಹೊರಟಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕನೊಬ್ಬ ಆಕೆಯ ಖಾಸಗಿ ಅಂಗಾಂಗ ಮುಟ್ಟಿದ್ದಾನೆ. ಈ ವೇಳೆ ಯುವಕನಿಗೆ ಸಖತ್ ಗೂಸಾ ಕೊಟ್ಟಿದ್ದು ಆತ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆತನನ್ನ ಹಿಡಿಯಲು ಪೊಲೀಸ್ರು ಕಾರ್ಯಾಚರಣೆ ನಡೆಸಿದ್ದಾರೆ.

ಇನ್ನು ಚರ್ಚ್ ಸ್ಟ್ರೀಟ್ ನಲ್ಲಿ ಜೋಡಿಯೊಂದು ಮದ್ಯದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸಿದೆ. ಬಾರ್ ನಿಂದ ಪಾರ್ಟಿ ಮುಗಿಸಿ ಹೊರಬಂದ ಜೋಡಿ ಅರೆಬೆತ್ತಲೆಯಾಗಿ ರೋಡ್ ನಡುವೆ ಲಿಪ್ ಲಾಕ್ ಮಾಡುತ್ತಾ ಅಸಭ್ಯವಾಗಿ ವರ್ತಿಸಿದೆ. ಇದ್ರಿಂದಾಗ ಸುತ್ತಲಿನ ಜನರು ಮುಜುಗರ ಪಡುವಂತಾಗಿದೆ.

ನಗರದ ಪ್ರಮುಖ ಹೈಟೆಕ್ ಏರಿಯಾಗಳು ಭರ್ಜರಿಯಾಗಿ ನ್ಯೂ ಇಯರ್ ಪಾರ್ಟಿ ಮಾಡುವ ವೇಳೆ ಇಂಥಾ ಘಟನೆಗಳು ಪದೆಪದೆ ನಡೆಯುತ್ತಿವೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿವೆ. ಇದ್ಯಾವುದು ಹೊಸದಲ್ಲಂತ ಬೆಂಗಳೂರಿಗರು ಭರ್ಜರಿಯಾಗಿ ನಿದ್ದೆ ಮಾಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!