ಪ್ರಕೃತಿ ಕರೆಗೆ ಎದ್ನೋ ಬಿದ್ನೋ ಎಂದು ಓಡಿದ ಕ್ರಿಕೆಟಿಗನ ವಿಡಿಯೋ ವೈರಲ್

483

ದುಬೈ: ನೈಜೀರಿಯಾ ಹಾಗೂ ಕೆನಡಾ ನಡುವಿನ ಪಂದ್ಯದಲ್ಲಿ ಫನ್ನಿ ಘಟನೆಯೊಂದು ನಡೆದಿದೆ. ನೈಜೀರಿಯಾ ಬ್ಯಾಟ್ಸಮನ್ ಸುಲೈಮಾನ್ ರುನ್ಸವೇ ಬ್ಯಾಟಿಂಗ್ ಟೈಂನಲ್ಲಿಯೇ ಗ್ರೌಂಡ್ ನಿಂದ ಓಡಿದ್ದಾರೆ. ಯಾಕೆಂದು ನೋಡಿದ್ರೆ ಪ್ರಕೃತಿ ಕರೆ ತಾಳಲಾರದೆ ಓಡಿದ್ದಾರೆ.

ಅಬುದಾಬಿಯಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವರ್ಲ್ಡ್ ಕಪ್ ಅರ್ಹತಾ ಪಂದ್ಯದಲ್ಲಿ ಈ ತಮಾಷೆ ನಡೆದಿದೆ. ಸುಲೈಮಾನ್ ಯಾಕೆ ಓಡಿ ಹೋದ್ರು ಅಂತಾ ಎಲ್ಲರೂ ಗೊಂದಲಕ್ಕೆ ಈಡಾಗಿದ್ರು. ಈ ವೇಳೆ ಕ್ಯಾಪ್ಟನ್ ಅಡೆಮೋಲಾ ಒನಿಕೋಯಿ ತರಾತುರಿಯಲ್ಲಿ ಆಟಕ್ಕೆ ಬರುವಷ್ಟರಲ್ಲಿ ಸುಲೈಮಾನ್ ಪ್ರತ್ಯಕ್ಷ.

ಪೆವಿಲಿಯನ್ ಆಚೆ ಕಾಣಿಸಿಕೊಂಡ ಸುಲೈಮಾನ್ ನನ್ನ ಅಂಪೈರ್ ಮತ್ತೆ ಕರೆದಿದ್ದಾರೆ. ಇದನ್ನ ನೋಡಿದ ಆಟಗಾರರು ಸೇರಿದಂತೆ ಪ್ರತಿಯೊಬ್ಬರು ಬಿದ್ದು ಬಿದ್ದು ನಕ್ಕಿದ್ದಾರೆ.




Leave a Reply

Your email address will not be published. Required fields are marked *

error: Content is protected !!