1 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದ 9 ಕುರಿಗಳು!

221

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಡಾಕಾ: ಏನಾದರೂ ತಂಟೆ ತಕರಾರುಗಳು ನಡೆದಾಗ ಮಾತನಾಡುವಾಗ ಕಾನೂನು ಎಲ್ಲರಿಗೂ ಒಂದೇ ಎನ್ನುತ್ತೇವೆ. ಅದು ಮನುಷ್ಯರಿಗೆ ಮಾತ್ರ ಅನ್ವಿಸುತ್ತೆ ಎಂದುಕೊಂಡಿದ್ದರೆ ತಪ್ಪು. ಯಾಕಂದರೆ, ಇಲ್ಲಿ ಪ್ರಾಣಿಗಳಿಗೆ ಜೈಲು ಶಿಕ್ಷೆ ನೀಡಲಾಗಿದೆ ಎನ್ನುದೇ ಸೋಜಿಗ. ಹೌದು, ಕಳೆದೊಂದು ವರ್ಷದಿಂದ 9 ಕುರಿಗಳು ಜೈಲು ಶಿಕ್ಷ ಅನುಭವಿಸಿ ಈಗ ಹೊರ ಬಂದಿವೆ.

ಬಾಂಗ್ಲಾದೇಶದ ಬಾರಿಸಾಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸ್ಮಶಾನದಲ್ಲಿ ಮೇಯಲು ಹೋಗಿ ಹೋದ 9 ಕುರಿಗಳನ್ನು ಡಿಸೆಂಬರ್ 6, 2022ರಂದು ಬಂಧಿಸಲಾಗಿತ್ತು. ಶಹಿರಿಯಾರ್ ಸಚಿಬ್ ರಾಜೀಬ್ ಎಂಬುವರಿಗೆ ಸೇರಿದ ಕುರಿಗಳನ್ನು ಬಂಧಿಸಲಾಗಿತ್ತು. ಬರಿಸಾಲ್ ಮೇಯರ್ ಕುರಿಗಳ ಬಿಡುಗಡೆಗೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಲಾಗಿದೆ. ಬಿಸಿಸಿ ಆಡಳಿತಾಧಿಕಾರಿ ಹೊಸೈನ್ ಹಾಗೂ ರೋಡ್ ಇನ್ಸ್ ಪೆಕ್ಟರ್ ರಿಯಾಜುಲ್ ಕರೀಮ್, ಇಮ್ರಾನ್ ಹೊಸೈನ್ ಸಮ್ಮುಖದಲ್ಲಿ 9 ಕುರಿಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಗಿದೆ.

ಭಾರತದಲ್ಲಿಯೂ ಸಹ ಇಂತಹ ಘಟನೆಗಳು ನಡೆದಿವೆ. 2016ರಲ್ಲಿ ಛತ್ತೀಸಗಡದ ಜನಕ್ ಪುರದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಪಾರ್ಕ್ ನಲ್ಲಿ ಹೂವುಗಳನ್ನು ತಿಂದಿದ್ದಕ್ಕೆ ಬಾಬ್ಲಿ ಎನ್ನುವ ಕುರಿಯನ್ನು ಬಂಧಿಸಿ 2 ದಿನ ಜೈಲಿನಲ್ಲಿ ಇಡಲಾಗಿತ್ತು. 2017ರಲ್ಲಿ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ 8 ಕತ್ತೆಗಳನ್ನು ಬಂಧಿಸಲಾಗಿತ್ತು. ಉರೈ ಜೈಲಿನ ಹೊರಗೆ 5 ಲಕ್ಷ ಮೌಲ್ಯದ ಸಸ್ಯಗಳನ್ನು ತಿಂದಿದ್ದಕ್ಕೆ ಬಂಧಿಸಲಾಗಿತ್ತು.




Leave a Reply

Your email address will not be published. Required fields are marked *

error: Content is protected !!