ಕರುನಾಡಿಗೂ ನೀಫಾ ಭೀತಿ

448

ಬೆಂಗಳೂರು: ನೆರೆಯ ರಾಜ್ಯ ಕೇರಳದಲ್ಲಿ ಸಾಕಷ್ಟು ಭೀತಿ ಹುಟ್ಟಿಸಿರುವ ನೀಫಾ ವೈರಸ್, ಇದೀಗ ಕರ್ನಾಟಕಕ್ಕೆ ಕಾಲಿಡುವ ಸಾಧ್ಯತೆ ಇದ್ದು, ಸರ್ಕಾರ ಈ ಬಗ್ಗೆ ಎಚ್ಚರಿಕೆ ನೀಡಿದೆ. ಕೇರಳಕ್ಕೆ ಹೊಂದಿಕೊಂಡತೆ ಇರುವ 8 ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಹೇಳಲಾಗಿದೆ.

ಆರೋಗ್ಯ ಸಚಿವಾಲಯ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಸೇರಿದಂತೆ 8 ಜಿಲ್ಲೆಗಳಲ್ಲಿ ನಿಗಾ ವಹಿಸಲು ಸೂಚಿಸಲಾಗಿದೆ. ಅಲ್ದೇ ಈ ಎಲ್ಲ ಜಿಲ್ಲೆಗಳ ಬಗ್ಗೆ ಪ್ರತಿದಿನ ಆರೋಗ್ಯ ಕುರಿತಾದ ವರದಿ ನೀಡುವಂತೆ ಹೇಳಲಾಗಿದೆ.

ಇನ್ನು ತಮಿಳುನಾಡಿನ ಊಟಿ, ನೀಲಿಗಿರಿ, ಕನ್ಯಾಕುಮಾರಿ, ದಿಂಡಿಗಲ್, ತೇಣಿ, ಕೊಯಮತ್ತೂರು ಹಾಗೂ ತಿರುವನ್ವೇಲಿಯಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಕೇರಳಕ್ಕೆ ತೆರಳುವ ರಾಜ್ಯದ ಜನತೆ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ರಾಜ್ಯದಲ್ಲಿ ನೀಫಾ ಸೋಂಕು ತಗುಲಿದ ವ್ಯಕ್ತಿ ಬಗ್ಗೆ ತಿಳಿದ್ರೆ, ಅವರನ್ನ ಉಳಿದವರಿಂದ ಪ್ರತ್ಯೇಕಿಸಿ ಅಂತಾ ಹೇಳಲಾಗ್ತಿದೆ.


TAG


Leave a Reply

Your email address will not be published. Required fields are marked *

error: Content is protected !!