ಕಂಪ್ಯೂಟರ್ ಬಾಬಾಗೆ ಎಂಪಿ ಸರ್ಕಾರದ ಗಿಫ್ಟ್

309

ಇಂದೋರ್: ಸಿಎಂ ಕಮಲ್ ನಾಥ್ ಅವರು ಕಂಪ್ಯೂಟರ್ ಬಾಬಾ ಎಂದೇ ಖ್ಯಾತರಾಗಿರುವ ನಾಮದೇವ್ ದಾಸ್ ತ್ಯಾಗಿ ಅವರಿಗೆ ಸರ್ಕಾರದಿಂದ ಭರ್ಜರಿ ಉಡುಗರೆಯೊಂದನ್ನ ನೀಡಿದ್ದಾರೆ. ನರ್ಮದಾ ನದಿ ಟ್ರಸ್ಟ್ ಗೆ ಕಂಪ್ಯೂಟರ್ ಬಾಬಾರನ್ನ ಚೇರಮನ್ ಆಗಿ ನೇಮಿಸಲಾಗಿದೆ.

ಮಧ್ಯಪ್ರದೇಶ ಸರ್ಕಾರ ಈ ಆದೇಶ ಹೊರಡಿಸಿದ್ದು, ನರ್ಮದಾ, ಮದಾಕಿನಿ ಹಾಗೂ ಕೀಶ್ರಾ ನದಿಗಳ ಟ್ರಸ್ಟ್ ಗೆ ವಿವಾದಿತ ಕಂಪ್ಯೂಟರ್ ಬಾಬಾ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ತ್ಯಾಗಿ ಅಧಿಕಾರಿ ವಹಿಸಿಕೊಳ್ಳುವ ಟೈಂನಲ್ಲಿ ಸಚಿವರು ಹಾಗೂ ದಿಗ್ವಜಯ ಸಿಂಗ್ ಉಪಸ್ಥಿತರಿದ್ರು. ಕಳೆದ ಮಾರ್ಚ್ 10ರಂದೇ ಈ ಆದೇಶ ಹೊರಡಿಸಿದ್ರು, ನಾಮದೇವ್ ದಾಸ್ ತ್ಯಾಗಿ ಅಧಿಕಾರ ವಹಿಸಿಕೊಂಡಿರ್ಲಿಲ್ಲ.

ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇವರು ಕಾಂಗ್ರೆಸ್ ಪರ ಕ್ಯಾಂಪೇನ್ ಮಾಡಿದ್ರು. ಇನ್ನು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಿಂಗ್ ಪರ ಸಹ ಪ್ರಚಾರ ಮಾಡಿದ್ರು. ಇದೀಗ ಇವರು ಸರ್ಕಾರದ ಮುಂದೆ ಹೆಲಿಕಾಪ್ಟರ್ ಗೆ ಡಿಮ್ಯಾಂಡ್ ಮಾಡಿದ್ದಾರೆ. ಇದ್ರಿಂದ ತಮ್ಮ ಕಾರ್ಯವನ್ನ ಆದಷ್ಟು ಬೇಗ ಮಾಡಲು ಸಾಧ್ಯವಾಗುತ್ತೆ ಅಂತಾ ಹೇಳಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!