8 ಸಮಿತಿ ರೆಡಿ ಮಾಡಿದ ಪ್ರಧಾನಿ

357

ನವದೆಹಲಿ: ಪ್ರಧಾನಿ ಮೋದಿ ಎಂಟು ಸಂಪುಟ ಸಮಿತಿಗಳನ್ನ ರೆಡಿ ಮಾಡಿದ್ದಾರೆ. ಇದರಲ್ಲಿ ಆರ್ಥಿಕ ಮತ್ತು ನಿರುದ್ಯೋಗ ವಿಷಯಕ್ಕೆ ಸಂಬಂಧಿಸಿದ ಸಮಿತ ಸಹ ಇದೆ. ಇದರಲ್ಲಿ ಆರ್ಥಿಕ ವ್ಯವಹಾರ ಹಾಗೂ ಉದ್ಯೋಗದ ಸಮಿತಿಗಳನ್ನ ಪ್ರಧಾನಿ ಮೋದಿ ಕಂಟ್ರೋಲ್ ಮಾಡಲಿದ್ದಾರೆ.

ಇನ್ನು ಈ ಸಮಿತಿಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಮನ್ ಸೇರಿದಂತೆ ಪ್ರಮುಖ ಸಚಿವರು ಇದರ ಒಂದು ಭಾಗವಾಗಲಿದ್ದಾರೆ.

ಈಗಾಗ್ಲೇ ಆರ್ಥಿಕ ಮತ್ತು ನಿರುದ್ಯೋಗ ವಿಚಾರಗಳಲ್ಲಿ ಸರ್ಕಾರ ಸಾಕಷ್ಟು ಸಮಸ್ಯೆಗಳನ್ನ ಎದುರಿಸ್ತಿದೆ. ಹೀಗಾಗಿ ಪ್ರಧಾನಿ ಮೋದಿ ಈ ಎರಡು ವಿಚಾರಗಳನ್ನ ಮುಖ್ಯವಾಗಿ ಕೇಂದ್ರಿಕರಿಸಿದ್ದಾರೆ. ಜುಲೈ 5 ರಂದು ಮೋದಿ ಸರ್ಕಾರದ ಮೊದಲ ಬಜೆಟ್ ನಡೆಯುವುದ್ರಿಂದ, ವಿರೋಧ ಪಕ್ಷಗಳ ಬಾಯಿಗೆ ಆಹಾರವಾಗಬಾರದು ಅನ್ನೋ ನಿಟ್ಟಿನಲ್ಲಿ ಸಕಲ ರೀತಿಯಿಂದ ಸಿದ್ಧತೆಗಳನ್ನ ಮಾಡಿಕೊಳ್ಳಲಾಗ್ತಿದೆ.


TAG


Leave a Reply

Your email address will not be published. Required fields are marked *

error: Content is protected !!