ಟೀಂ ಇಂಡಿಯಾ ಗೆಲುವಿನ ಶುಭಾರಂಭ

365

ವರ್ಲ್ಡ್ ಕಪ್ ನಲ್ಲಿ ದಕ್ಷಿಣ ಆಫ್ರಿಕ್ ವಿರುದ್ಧ ತನ್ನ ಮೊದಲ ಪಂದ್ಯವಾಡಿದ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಅಬ್ಬರದ ಶತಕದ ನೆರವಿನಿಂದ ಬ್ಲೂ ಬಾಯ್ಸ್ ಟೀಂ, ಗೆಲುವಿನ ಮೂಲಕ ಸರಣಿಯನ್ನ ಆರಂಭಿಸಿದೆ. ಭಾರತದ ಪರ ರೋಹಿತ್ ಶರ್ಮಾ 122, ಎಂಎಸ್ ಧೋನಿ 34 ರನ್ ಬಾರಿಸಿ ರೋಹಿತ್ ಗೆ ಸಾಥ್ ನೀಡಿದ್ರು. ನಂತರ ಬಂದ ಹಾರ್ದಿಕ್ ಪಾಂಡೆ 15 ಬಾರಿಸಿ ಗೆಲುವಿನ ದಡ ಸೇರಿಸಿದ್ರು. 47.2 ಓವರ್ ನಲ್ಲಿ 230 ರನ್ ಬಾರಿಸಿತು.

ಶತಕ ದಾಖಲಿಸಿದ ರೋಹಿತ್ ಶರ್ಮಾ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕ್ ಟೀಂ 9 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತು. ದಕ್ಷಿಣ ಆಫ್ರಿಕ್ ಪರ ಹಸೀಮ್ ಆಮ್ಲಾ 6, ಡಿ ಕಾಕ್ 10, ಡುಪ್ಲಸಿ 38, ಡುಸಿನ್ 22 ಹಾಗೂ ಡೇವಿಡ್ ಮಿಲ್ಲರ್ 31, ಡುಮಿನಿ 3, ಫಿಯೂಲ್ ಕುಯಾ 34, ಕ್ರಿಶ್ ಮಾರಿಸ್ 41 ಹಾಗೂ ರಬಾಡ್ 31 ರನ್ ಬಾರಿಸಿದ್ದಾರೆ. ಒಟ್ಟು 50 ಓವರ್ ಗೆ 9 ವಿಕೆಟ್ ನಷ್ಟಕ್ಕೆ 227ರನ್ ಬಾರಿಸಿತು.

228 ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಶತಕದ ನೆರವಿನಿಂದ ಭರ್ಜರಿಯಾಗಿ ಗೆಲುವು ದಾಖಲಿಸಿತು. 7 ವಿಕೆಟ್ ಅಂತರದಿಂದ ಟೀಂ ಇಂಡಿಯಾ ವಿಜಯ ಸಾಧಿಸಿತು. ಈ ಮೂಲಕ ಗೆಲುವಿನೊಂದಿಗೆ ವರ್ಲ್ಡ್ ಕಪ್ ಟೂರ್ನಿ ಶುರು ಮಾಡಿದೆ. ಶಿಖರ್ ಧವನ್ 8, ವಿರಾಟ್ ಕೊಹ್ಲಿ 18 ಹಾಗೂ ಕೆ.ಎಲ್ ರಾಹುಲ್ 26 ರನ್ ಮಾತ್ರ ಗಳಿಸಿದ್ದು, ನಿರಾಸೆ ಮೂಡಿಸಿದ್ರು.


TAG


Leave a Reply

Your email address will not be published. Required fields are marked *

error: Content is protected !!