ನವರಸ-ಪವರ್ ಸ್ಟಾರ್ ಹುಟ್ಟು ಹಬ್ಬದ ಸಂಭ್ರಮ

323

ಸ್ಯಾಂಡಲ್ ವುಡ್ ಅಂಗಳದ ಇಬ್ಬರು ಸ್ಟಾರ್ ನಟರ ಹುಟ್ಟು ಹಬ್ಬದ ಸಂಭ್ರಮ. ನವರಸ ನಾಯಕ ಜಗ್ಗೇಶ ಹಾಗೂ ಪವರ್ ಸ್ಟಾರ್ ಪುನೀತರಾಜಕುಮಾರ ಅವರು ತಮ್ಮ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದಾರೆ. ನಟ ಜಗ್ಗೇಶ ಅವರು ಮಂತ್ರಾಲಯದ ಗುರು ರಾಯರ ಸನ್ನಿಧಿಯಲ್ಲಿ ಜನುಮ ದಿನವನ್ನ ಆಚರಿಸಿಕೊಂಡಿದ್ದಾರೆ.

ಇನ್ನು ಪವರ್ ಸ್ಟಾರ್ ಪುನೀತರಾಜಕುಮಾರ, ಸಿಂಪಲ್ ಆಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಕರೋನಾ ಭೀತಿಯಿಂದಾಗಿ ಯಾವುದೇ ಅಭಿಮಾನಿಗಳಿಗೆ ಅವರ ಮನೆಗೆ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಅತ್ಯಂತ ಸರಳವಾಗಿ ಬರ್ಥ್ ಡೇ ಆಚರಿಸಿಕೊಂಡಿದ್ದಾರೆ.

ಈ ಇಬ್ಬರು ನಟರಿಗೆ ಚಂದನವನದ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಅವರ ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!