ಚಾಲಕನ ಅನುಮಾನಸ್ಪದ ಸಾವು: ಪ.ಪಂ ಸದಸ್ಯನ ವಿರುದ್ಧ ಆರೋಪ

350

ಸಾಗರ: ಚಾಲಕ ಹರ್ಷಕುಮಾರ ಅನುಮಾನಸ್ಪದ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ವಾಹನ ಚಾಲಕರು ಮತ್ತು ಮಾಲೀಕರ ಸಂಘ, ಕರ್ನಾಟಕ ಕ್ರಾಂತಿರಂಗ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಸಾಗರ ಘಟಕ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ ಮೌನ ಪ್ರತಿಭಟನೆ ನಡೆಸಲಾಗಿದೆ.

ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತ್ನಾಡಿದ ಹರ್ಷಕುಮಾರ ಸಹೋದರಿ ಆಶಾರಾಣಿ, ನನ್ನ ಅಣ್ಣ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಆಗಿರಲಿಲ್ಲ. ಅವರಿಗೆ ಮಾನಸಿಕ ಹಿಂಸೆ ನೀಡಲಾಗುತಿತ್ತು. ನನ್ನ ಸಹೋದರನ ಆತ್ಮಹತ್ಯೆಗೆ ಪಟ್ಟಣ ಪಂಚಾಯ್ತಿ ಸದಸ್ಯ ನಾಗರಾಜ ವಾಟೆಮಕ್ಕಿ ನೇರ ಕಾರಣವಾಗಿದ್ದು, ತಕ್ಷಣ ಅವರನ್ನ ಬಂಧಿಸಿ ವಿಚಾರಣೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಗಂಭೀರ ಆರೋಪ ಮಾಡಿದ್ದಾರೆ.

ತಾಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಚಾಲಕ ಹರ್ಷಕುಮಾರ ಅನುಮಾನಸ್ಪದ ಸಾವು ನೋವು ತಂದಿದೆ. ಇವರು ಆತ್ಮಹತ್ಯೆ ಮಾಡಿಕೊಂಡಿರುವ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಆರೋಪಿಸಿದರು.

ಕಾರು ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಂ.ಎಸ್.ಭಟ್, ಸಾಮಾಜಿಕ ಹೋರಾಟಗಾರ ಎಚ್.ಬಿ.ರಾಘವೇಂದ್ರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅರುಣಕುಗ್ವೆ, ನ್ಯಾಯವಾದಿ ಕೆ.ಎಚ್.ಸುದರ್ಶನ, ಉಮೇಶ ಸೂರನಗದ್ದೆ, ಗಿರೀಶ ಕೋವಿ, ರಮೇಶ, ಪ್ರವೀಣ ಬಣಕಾರ, ಮನೋಜ್ ಕುಗ್ವೆ, ತುಕಾರಾಮ ಬಿ. ಶಿರವಾಳ, ಸುಧಾಕರ ಕುಗ್ವೆ, ಕನ್ನಪ್ಪ ಮುಳಕೇರಿ, ಶಿವಾನಂದ ಕುಗ್ವೆ, ಕುಂಟಗೋಡು ಸೀತಾರಾಮ ಇತರರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!