ಪ್ರಜಾಸ್ತ್ರ ಸುದ್ದಿ
ಯಾದಗಿರಿ: ಸುಮಾರು 3 ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ರಿಂದ, ಆಕ್ಸಿಜನ್ ನಿಂತು ಹೋಗಿದೆ. ಇದ್ರಿಂದಾಗಿ ಕೋವಿಡ್ ಸೋಂಕಿತರೊಬ್ಬರು ಸಾವನ್ನಪ್ಪಿದ ಘಟನೆ ತಾಲೂಕಿನ ಮುದ್ನಾಳ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆಯಲ್ಲಿ ಜನರೇಟರ್ ಇದೆ. ಆದ್ರೆ, ಡೀಸೆಲ್ ಇಲ್ಲದ ಪರಿಣಾಮ ವಿದ್ಯುತ್ ಸಂಪರ್ಕ ನೀಡಲು ಆಗಿಲ್ಲ. ರೋಗಿಯ ಸಂಬಂಧಿಕರು ವೈದ್ಯರು, ಸಿಬ್ಬಂದಿಗೆ ಹೇಳಿದ್ರೂ ತಕ್ಷಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳಲು ಆಗಿಲ್ಲ. ಹೀಗಾಗಿ ಸುಮಾರು 3 ಗಂಟೆಗಳ ಕಾಲ ಕರೆಂಟ್ ಬಂದಿಲ್ಲ. ಇದ್ರಿಂದಾಗಿ ಸೋಂಕಿತನಿಗೆ ಆಕ್ಸಿಜನ್ ಸಿಗದೆ ಸಾವನ್ನಪ್ಪಿದ್ದಾರೆ.