ನೆರೆ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ಸಚಿವ ಜೋಶಿ

330

ಹುಬ್ಬಳ್ಳಿ : ಹುಬ್ಬಳ್ಳಿ ನಗರದ ನೆರೆ ಪ್ರದೇಶಗಳಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿದ್ರು. ಹುಬ್ಬಳ್ಳಿ ನಗರದಲ್ಲಿ ಅತಿವೃಷ್ಠಿಯಿಂದ ಹಾನಿಗೊಳಗಾದ ವೀರಭದ್ರೇಶ್ವರ ಕಾಲೊನಿ ಹನಮಂತನಗರ, ದೇವಿನಗರದ ರಾಜಕಾಲುವೆ ಸೇತುವೆಗಳು, ನೂತನ ನ್ಯಾಯಾಲಯ ಸಂಕೀರ್ಣ, ಹೊಸೂರ ಕೊಳಚೆ ಪ್ರದೇಶ, ಬನಶಂಕರಿ, ನೇಕಾರ ನಗರಗಳಲ್ಲಿ ಹಾನಿಗೊಳಗಾದ ಮನೆಗಳು ಹಾಗೂ ಪುನರ್ವಸತಿ ಕೇಂದ್ರಗಳನ್ನ ಭೇಟಿ ಮಾಡಿದ್ರು.

ಈ ವೇಳೆ ಮಾತ್ನಾಡಿದ ಅವರು, ಕೇಂದ್ರ ಸರ್ಕಾರದ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಕರ್ನಾಟಕದಲ್ಲಿ ಸಂಭವಿಸಿರುವ ಅತಿವೃಷ್ಠಿ ಪರಿಹಾರ ಕಾರ್ಯಗಳಿಗೆ 200 ಕೋಟಿ ಬಿಡುಗಡೆ ಮಾಡಲಾಗಿದೆ ಅಂತಾ ಹೇಳಿದ್ರು.

ಮೊದಲ ಕಂತಿನಲ್ಲಿ 78 ಕೋಟಿ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರದ ಕೋರಿಕೆ ಮೇರಗೆ ಇಂದು 128 ಕೋಟಿ ಹಣವನ್ನು ಬಿಡುಗಡೆ ಮಾಡಲಾಗುವುದು. ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ನಿಧಿಯಲ್ಲಿ 100 ಕೋಟಿ‌ ರೂಪಾಯಿಗಳ ನಿಧಿಯಿದ್ದು ತತ್ ಕ್ಷಣದ ಪರಿಹಾರ ಕಾಮಗಾರಿಗಳು ಕೈ ಗೊಳ್ಳಲಾತ್ತಿದೆ. ರಾಜ್ಯದ ‌15 ಜಿಲ್ಲೆಗಳಲ್ಲಿ ಪ್ರವಾಹ ಸ್ಥತಿ ಇದ್ದು, ಇದುವರೆಗೆ 45 ಸಾವಿರಕ್ಕೂ ಹೆಚ್ಚಿನ ಜನರು ಮಳೆಯಿಂದಾಗಿ ನಿರಾಶ್ರಿತರಾಗಿದ್ದು, ಒಟ್ಟು 17 ಸಾವಿರ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ ಅಂತಾ ತಿಳಿಸಿದ್ರು.




Leave a Reply

Your email address will not be published. Required fields are marked *

error: Content is protected !!