ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರತೆಯಿಲ್ಲ.. ನೋ ಟೆನ್ಷನ್..

317

ನವದೆಹಲಿ: ದೇಶದಲ್ಲಿ ಕರೋನಾ ತನ್ನ ಕಬಂಧಬಾಹುವನ್ನ ಎಲ್ಲೆಡೆ ವ್ಯಾಪಿಸಿಕೊಳ್ತಿದೆ. ಇದಕ್ಕೆ ಸಿಕ್ಕು ಎಲ್ಲೆಡೆ ಸಾವು ನೋವಿನ ಪ್ರಮಾಣ ಹೆಚ್ಚಾಗ್ತಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ಎನ್ನಲಾಗ್ತಿರುವ ಮೆಲೇರಿಯಾಗೆ ಕೊಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಕೊರತೆಯಿತ್ತು ಎಂದು ಹೇಳಲಾಗ್ತಿತ್ತು. ಆದ್ರೆ, ಇದರ ಸಮಸ್ಯೆಯಿಲ್ಲ ಎಂದು ತಿಳಿದು ಬಂದಿದೆ.

ಈ ತಿಂಗಳಲ್ಲಿಯೇ 20 ಕೋಟಿ ಮಾತ್ರೆಗಳನ್ನ ಔಷಧಿ ಉತ್ಪನ್ನ ಉದ್ಯಮಗಳು ಉತ್ಪಾದಿಸಿವೆ ಎಂದು ಅಹಮದಾಬಾದನ ಜಿಡಾಸ್ ಕ್ಯಾಡಿಲಾ ಔಷಧೋತ್ಪನ ಕಂಪನಿ ಸಿಇಓ ಪಂಕಜ ಪಟೇಲ ತಿಳಿಸಿದ್ದಾರೆ. ಕರೋನಾ ವಿರುದ್ಧ ಹೋರಾಡಲು ಈ ಮಾತ್ರೆಯನ್ನ ಜಗತ್ತಿನಾದ್ಯಂತ ಬೇಡಿಕೆ ಬಂದಿತ್ತು. ಅದನ್ನ ಪೂರೈಕೆ ಮಾಡಲಾಗಿದೆ. ಇದರ ಜೊತೆಗೆ ದೇಶಕ್ಕೆ ಬೇಕಾಗುವಷ್ಟು ಔಷಧಿ ಇದೆ ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!