ವಿಜಯಪುರದಲ್ಲಿ ಪ್ಯಾರಾಸಿಟಮಲ್ ಪಡೆಯುವವರ ಮಾಹಿತಿ ಸಂಗ್ರಹ

370

ವಿಜಯಪುರ: ಕರೋನಾ ಎಮರ್ಜೆನ್ಸಿ ಹಾಗೂ ಲಾಕ್ ಡೌನ್ ವಿಚಾರ ಸಂಬಂಧ ಜಿಲ್ಲಾಧಿ ವೈ.ಎಸ್ ಪಾಟೀಲ ಅವರು ಮಾಹಿತಿ ನೀಡಿದ್ದು, ಇಲ್ಲಿಯವರೆಗೆ ಒಟ್ಟು 451 ಜನರನ್ನ ನಿಗಾದಲ್ಲಿಡಲಾಗಿದೆ. 258 ಜನರು 28 ದಿನಗಳ ನಿಗಾ ಪೂರೈಸಿದ್ದಾರೆ. 138 ಜನರು 15 ರಿಂದ 28 ದಿನಗಳ ಕಾಲಾವಧಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

55 ಜನರು ಕ್ವಾರಂಟೈನ್ ನಲ್ಲಿದ್ದಾರೆ. 32 ಜನರನ್ನ ಸರ್ಕಾರಿ ಆಸ್ಪತ್ರೆಯ ಐಸೋಲೇಷನ್ ನಲ್ಲಿಡಲಾಗಿದೆ. 92 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ 65 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. 27 ಜನರ ಗಂಟಲು ದ್ರವ ಮಾದರಿಯ ವರದಿಗೆ ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಇಂದಿನಿಂದ ಮೆಡಿಕಲ್ ಶಾಪ್ ಗಳಲ್ಲಿ ಪ್ಯಾರಾಸಿಟಮಲ್ ಮಾತ್ರೆ ಸಂಗ್ರಹ ಹಾಗೂ ವಿತರಣೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ಯಾರಾಸಿಟಮಲ್ ಮಾತ್ರೆ ಪಡೆಯುವವರ ಹೆಸರು ದೂರವಾಣಿ ಹಾಗೂ ವೈದ್ಯರ ಮಾಹಿತಿ ಪಡೆಯಲಾಗುತ್ತದೆ. ಜಿಲ್ಲೆಯಿಂದ ಯಾರನ್ನೂ ಹೊರ ಹೋಗಲು ಬಿಡಲ್ಲ. ಅನಿವಾರ್ಯವಾಗಿ ಹೊರ ಹೋಗಿ ಬಂದವರಿಗೆ ಕ್ವಾರಂಟೈನ್ ಕಡ್ಡಾಯವೆಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!