ಇಥೋಪಿಯಾ ಪ್ರಧಾನಿಗೆ ನೊಬೆಲ್ ಶಾಂತಿ ಪ್ರಶಸ್ತಿ

346

ಅಂತಾರಾಷ್ಟ್ರೀಯ ಸುದ್ದಿ: ನ್ಯೂಸ್ ಡೆಸ್ಕ್

ನಿನ್ನೆಯಷ್ಟೇ ಸಾಹಿತ್ಯ ಹಾಗೂ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಪ್ರಕಟವಾಗಿತ್ತು. ಇಂದು ಶಾಂತಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಇಥೋಪಿಯಾ ಪ್ರಧಾನಿ ಅಬಿಯಾ ಅಹ್ಮೀದ್ ಅಲಿಗೆ 2019ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿದೆ.

43 ವರ್ಷದ ಅಬಿಯಾ ಅಹ್ಮೀದ್ ಅಲಿಗೆ, ಎರಿಟ್ರಿಯಾದೊಂದಿಗಿನ ಬಿಕ್ಕಟ್ಟನ್ನು ಸೌಹಾರ್ದತವಾಗಿ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕೆ ಈ ಪುರಸ್ಕಾರ ದೊರೆತಿದೆ.

1998ರಿಂದ 2000ದ ವರೆಗೂ ಇಥೋಪಿಯಾ ಹಾಗೂ ಎರಿಟ್ರಿಯಾಗಳು ಗಡಿ ಸಮಸ್ಯೆ ಎದುರಿಸ್ತಿದ್ವು. 2018ರಲ್ಲಿ ಇಥೋಪಿಯಾ ಪ್ರಧಾನಿಯಾದ 6 ತಿಂಗಳಲ್ಲಿಯೇ ಜೈಲಿನಲ್ಲಿದ್ದ ಎರಿಟ್ರಿಯಾ ಕೈದಿಗಳನ್ನ ಬಿಡುಗಡೆಗೊಳಿಸಿ, ದೇಶ ನಡೆಸಿದ ಕ್ರೌರ್ಯಕ್ಕೆ ಕ್ಷಮೆ ಕೋರಿದ್ರು.




Leave a Reply

Your email address will not be published. Required fields are marked *

error: Content is protected !!