ವಿಶ್ವದ ನಂಬರ್ 1 ಟೆನ್ನಿಸ್ ತಾರೆ 3 ವರ್ಷ ಗಡಿಪಾರು

418

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮೆಲ್ಬೋರ್ನ್: ಬರೋಬ್ಬರಿ 20 ಬ್ರಾಂಡ್ ಸ್ಲಾಮ್ ಗೆದ್ದಿರುವ ವಿಶ್ವದ ಖ್ಯಾತ ಟೆನ್ನಿಸ್ ತಾರೆ ನೊವಾಕ್ ಜೊಕೊವಿಕ್ ಅವರನ್ನು ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ಗಡಿಪಾರು ಮಾಡಿದೆ. ಈ ಮೂಲಕ 3 ವರ್ಷಗಳ ಕಾಲ ಅವರು ಆಸ್ಟ್ರೇಲಿಯಾಗೆ ಬರುವಂತಿಲ್ಲ.

ಅಷ್ಟಕ್ಕೂ ಆಗಿದ್ದು ಏನಂದರೆ, ಸೆರ್ಬಿಯಾದ 34 ವರ್ಷದ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಕೋವಿಡ್ 19 ಲಸಿಕೆ ಹಾಕಿಸಿಕೊಂಡಿಲ್ಲ. ಹೀಗಾಗಿ ವಿಶ್ವದ ನಂಬರ್ ಟೆನ್ನಿಸ್ ಆಟಗಾರ ಆಸ್ಟ್ರೇಲಿಯಾ ಮುಕ್ತ ಟೆನ್ನಿಸ್ ಪಂದ್ಯದಲ್ಲಿ 21ನೇ ಗ್ರಾಂಡ್ ಸ್ಲಾಮ್ ಗೆದ್ದು ಬೀಗಬೇಕು ಅನ್ನೋದಕ್ಕೆ ಬ್ರೇಕ್ ಹಾಕಲಾಗಿದೆ.

ಜೊಕೊವಿಕ್ ವೀಸಾ ರದ್ದುಗೊಳಿಸಿದ ಆಸ್ಟ್ರೇಲಿಯಾ ವಲಸೆ ಖಾತೆ ಸಚಿವರ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ, ಸಚಿವರ ಆದೇಶವನ್ನು ಫೆಡರಲ್ ಕೋರ್ಟ್ ಎತ್ತಿ ಹಿಡಿದಿದೆ. ಇವರನ್ನು ಗಡಿಪಾರು ಮಾಡುವವರೆಗೂ ಮೆಲ್ಬೋರ್ನ್ ದಲ್ಲಿ ಗೃಹಬಂಧನದಲ್ಲಿ ಇಡಲಾಗುತ್ತೆ. ಜೊಕೊವಿಕ್ ಲಸಿಕೆ ಪಡೆಯದೆ ಇರುವುದರಿಂದ ಅದು ಜನರ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಅವರ ವೀಸಾವನ್ನು ರದ್ದುಗೊಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!