ನ.10ರಂದು ಸಿಲಿಕಾನ್ ಸಿಟಿಯಲ್ಲಿ ನೋ ಎಣ್ಣೆ

337

ಬೆಂಗಳೂರು: ನವೆಂಬರ್ 10ರಂದು ಸಿಲಿಕಾನ್ ಸಿಟಿಯಲ್ಲಿ ಮದ್ಯ ಸಿಗುವುದಿಲ್ಲ. ಬೆಳಗ್ಗೆ 6ಗಂಟೆಯಿಂದ ರಾತ್ರಿ 12ಯ ತನಕ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ ರಾವ್ ಈ ಆದೇಶ ಹೊರಡಿಸಿದ್ದಾರೆ.

ನವೆಂಬರ್ 10ರಂದು ಈದ್ ಮಿಲಾದ್ ಹಬ್ಬವಿದೆ. ಹೀಗಾಗಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯ ನಿಷೇಧ ಮಾಡಲಾಗಿದೆ. ಐಪಿಸಿ ಕಲಂ 144 ಉಪ ಕಲಂ (1) ಮತ್ತು (3) ಅನ್ವಯ ಬಾರ್, ಪಬ್, ವೈನ್ ಶಾಪ್ ಗಳು ಸೇರಿದಂತೆ ಮದ್ಯ ಮಾರಾಟದ ಅಂಗಡಿಗಳು ಕ್ಲೋಸ್ ಮಾಡಬೇಕು ಎಂದು ತಿಳಿಸಲಾಗಿದೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ




Leave a Reply

Your email address will not be published. Required fields are marked *

error: Content is protected !!