ಓಮೈಕ್ರಾನ್ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ

177

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಈಗ ಎಲ್ಲೆಡೆ ಕರೋನಾ ರೂಪಾಂತರ ಓಮೈಕ್ರಾನ್ ಬಗ್ಗೆ ಆತಂಕ ಶುರುವಾಗಿದೆ. ಹಲವು ದೇಶಗಳು ಅಂತಾರಾಷ್ಟ್ರೀಯ ವಿಮಾನ ಹಾರಾಟ ಬಂದ್ ಮಾಡಿವೆ. ಇನ್ನು ದೇಶದಲ್ಲಿ ಬಿಗಿ ಭದ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ, ಒಂದು ನೆಮ್ಮದಿಯ ಸಂಗತಿ ಅಂದರೆ ಓಮೈಕ್ರಾನ್ ಆತಂಕ ಪಡುವ ಅಗತ್ಯವಿಲ್ಲವೆಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಜೀನೋಮ್ ಸೀಕ್ವೆನ್ಸಿಂಗ್ ತಜ್ಞ ಡಾ.ಅನುರಾಗ್ ಅಗರವಾಲ್, ಒಮಿಕ್ರಾನ್ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಡೆಲ್ಟಾ ರೂಪಾಂತರಕ್ಕಿಂತ 6 ಪಟ್ಟು ಹೆಚ್ಚ ಹರಡುತ್ತದೆ ಎಂದು ಯಾವುದೇ ಅಧ್ಯಯನ ನಡೆಸಿದ್ದರೆ ಅದು ಕೆಟ್ಟ ವಿಜ್ಞಾನವಾಗಿದೆ ಅಂತಾ ಹೇಳಿದ್ದಾರೆ. ಹೀಗಾಗಿ ಯಾರು ಆತಂಕಕ್ಕೆ ಒಳಗಾಗಬಾರದು. ಲಸಿಕೆ ಹಾಕಿಸಿಕೊಳ್ಳಿ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!