ನಾಳೆ ತೆರೆಗೆ ಆರ್ಕೆಸ್ಟ್ರಾ ಮೈಸೂರು

128

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಪೂರ್ಣಚಂದ್ರ ನಟನೆಯ ಆರ್ಕೆಸ್ಟ್ರಾ ಮೈಸೂರು ಸಿನಿಮಾ ಜನವರಿ 12 ಗುರುವಾರ ರಿಲೀಸ್ ಆಗುತ್ತಿದೆ. ಸುನೀಲ್ ಮೈಸೂರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಟ, ನಿರ್ಮಾಪಕ ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಹಾಗೂ ಕೆಆರ್ ಜಿ ಸ್ಟುಡಿಯೋ ಅಡಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಅಶ್ವಿನ್ ವಿಜಯಕುಮಾರ್ ಹಾಗೂ ರಘು ದಿಕ್ಷೀತ್ ಬಂಡವಾಳ ಹೂಡಿದ್ದಾರೆ.

ಓರ್ವ ಯುವಕ ಗಾಯಕನಾಗಬೇಕು ಎಂದು ಕನಸು ಕಾಣುತ್ತಾ ಅದನ್ನು ಸಾಧಿಸುವಲ್ಲಿ ಏನೆಲ್ಲ ಏಳುಬೀಳುಗಳನ್ನು ಕಾಣುತ್ತಾನೆ ಅನ್ನೋ ಕಥೆಯಿದೆ. ಈಗಾಗ್ಲೇ ಈ ಚಿತ್ರದ ಹಾಡುಗಳು, ಟ್ರೇಲರ್ ಭರ್ಜರಿ ಹಿಟ್ ಆಗಿವೆ. ನಟ ಡಾಲಿ ಧನಂಜಯ್ ಸಾಹಿತ್ಯ ಬರೆದರೆ, ರಘು ದಿಕ್ಷೀತ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಈ ಸಂಕ್ರಾಂತಿಗೊಂದು ಕನ್ನಡ ಸಿನಿಮಾ ಎಂದು ಹೇಳುತ್ತಲೇ ಹಲವು ಅದ್ಭುತ್ ಪ್ರಮೋಷನ್ ವಿಡಿಯೋಗಳನ್ನು ಮಾಡಿರುವ ಚಿತ್ರ ತಂಡ ಸಾಕಷ್ಟು ಭರವಸೆ ಮೂಡಿಸಿದೆ. ಸಿನಿ ಪ್ರಿಯರಿಗೆ ಆರ್ಕೆಸ್ಟ್ರಾ ಮೈಸೂರು ಒಂದೊಳ್ಳೆ ಮನರಂಜನೆ ನೀಡಲಿದೆ ಅನ್ನೋದು ಮಾತ್ರ ಪಕ್ಕಾ.




Leave a Reply

Your email address will not be published. Required fields are marked *

error: Content is protected !!