ಸಂಸತ್ ಸಿಬ್ಬಂದಿಯ ಹೊಸ ಸಮವಸ್ತ್ರ ವಿವಾದ

269

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಸಂಸತ್ ಸಿಬ್ಬಂದಿಯ ಹೊಸ ಸಮವಸ್ತ್ರ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಂಸತ್ ಸಿಬ್ಬಂದಿಯ ಸಮವಸ್ತ್ರದ ಮೇಲೆ ಕಮಲದ ಹೂವಿನ ಚಿತ್ರ ಮುದ್ರಿಸಲಾಗಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿವೆ.

ರಾಷ್ಟ್ರೀಯ ಪ್ರಾಣಿ ಹುಲಿ, ಪಕ್ಷಿ ನವಿಲು ಬಿಟ್ಟು ಕಮಲವನ್ನು ಯಾಕೆ ಹೊಸ ಸಮವಸ್ತ್ರದ ವೇಲೆ ಮುದ್ರಿಸಲಾಗಿದೆ ಎಂದು ಕಾಂಗ್ರೆಸ್ ನ ವಿಪ್ ಮಾಣಿಕ್ಕಂ ಟ್ಯಾಗೋರ್ ಪ್ರಶ್ನಿಸಿದ್ದಾರೆ. ಹೀಗಾಗಿ ಮಂಗಳವಾರ ಸಂಸತ್ ನಲ್ಲಿ ವಾಗ್ವಾದ ನಡೆದಿದೆ.

ಇದು ಅತ್ಯಂತ ಸಣ್ಣತನದ ಕೆಲಸ. ಸಂಸತ್ ಎಲ್ಲ ಪಕ್ಷಗಳಿಗಿಂತ ಮೇಲಿದೆ. ಇದನ್ನು ಏಪಕ್ಷೀಯ ಭಾಗವಾಗುವಂತೆ ಮಾಡಬೇಡಿ ಎಂದು ವಿಪಕ್ಷಗಳು ಆಕ್ರೋಶ ಹೊರ ಹಾಕಿವೆ.




Leave a Reply

Your email address will not be published. Required fields are marked *

error: Content is protected !!