ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಕಳ್ಳರ ಗ್ಯಾಂಗ್

489

ಬೆಂಗಳೂರು: ಕಳ್ಳತನ ಮಾಡುವ ಗ್ಯಾಂಗ್ ತಮ್ಮದೆಯಾದ ವಿಭಿನ್ನ ಸ್ಟೈಲ್ ಹೊಂದಿರ್ತಾರೆ. ತಮ್ಮ ಕೈಚಳಕ ಯಾರಿಗೂ ಗೊತ್ತಾಗಬಾರದೆಂದು ಹಲವು ರೀತಿಯ ಕಸರತ್ತುಗಳನ್ನ ಮಾಡ್ತಾರೆ. ಅದೇ ರೀತಿ ಇಲ್ಲೊಂದು ಗ್ಯಾಂಗ್ ಇದೆ. ಈ ಟೀಂ ಚಡ್ಡಿ, ಮುಖಕೊಂದು ಬಟ್ಟೆ ಕಟ್ಟಿಕೊಂಡು ಕಳ್ಳತನ ಮಾಡುತ್ತೆ.

ಈ ವಿಚಿತ್ರ ಗ್ಯಾಂಗ್ ನ ಖತರ್ನಾಕ್ ಸ್ಟೈಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತುಂಬಾ ವಿಚಿತ್ರವಾಗಿ ಕಾಣಿಸಿಕೊಳ್ಳುವ ಗ್ಯಾಂಗ್ ಸಪ್ಪಳವಾಗಬಾರದೆಂದು ಚಪ್ಪಲಿಯನ್ನ ಸಹ ಕಳಚಿರುತ್ತೆ. ಕೈಯಲ್ಲೊಂದು ಕಲ್ಲು ಇರುತ್ತೆ. ಯಾರಾದ್ರೂ ಎದುರಾದ್ರೆ ದಾಳಿ ಮಾಡಲು. ಅಲ್ದೇ, ಹೀಗೆ ಇವರು ಬರೀ ಮೈಮೇಲೆ ತಿರುಗಾಡಲು ಕಾರಣ, ಮೈಗೆ ಎಣ್ಣೆಯನ್ನ ಹಚ್ಚಿಕೊಂಡಿರ್ತಾರೆ. ಯಾರಾದ್ರೂ ಹಿಡಿಯಲು ಬಂದ್ರೆ ತಪ್ಪಿಸಿಕೊಳ್ಳಲು ಸಹಾಯವಾಗ್ಲೆಂದು ಕಳ್ಳರು ಈ ಐಡಿಯಾ ಮಾಡಿದ್ದಾರೆ.

ಮನೆಯೊಂದರಲ್ಲಿ ಕಳ್ಳತನ ಮಾಡಿರುವ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಆ ಮನೆಯಲ್ಲಿ ನಾಯಿ ಇದ್ರೂ, ಅದಕ್ಕೂ ಗೊತ್ತಾಗದಷ್ಟು ಸೂಕ್ಷ್ಮವಾಗಿ ಬಂದು ತಮ್ಮ ಕೆಲಸ ಮುಗಿಸಿಕೊಂಡು ಹೋಗಿದ್ದಾರೆ. ಈ ವಿಚಿತ್ರ ಗ್ಯಾಂಗ್ ಹಿಡಿಯಲು ಪೊಲೀಸ್ರು ಬಲೆ ಬೀಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!